ಪ್ಲಾಸ್ಟಿಕ್ ನಿಷೇಧವಿದ್ದರು ಅನಧಿಕೃತವಾಗಿ ಯಾವುದೇ ಪರವಾನಿಗೆ ಪಡೆಯದೆ ಪ್ಲಾಸ್ಟಿಕ್ ಪೌಚಗಳನ್ನು ತಯಾರಿಸುತ್ತಿರುವುದು ಕಂಡು ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 3 ಟನ್ ಪ್ಲಾಸ್ಟಿಕ್ ಪೌಚ್ ಗಳನ್ನು ವಶಕ್ಕೆ ಪಡೆದುಕೊಂಡರು.
ನೀರಿನ ಪ್ಲಾಸ್ಟಿಕ್ ಪೌಚಗಳು ಮತ್ತು ಪೆಟ್ ಬಾಟಲ್ ಹಾಗೂ ಎಲ್ಲಾ ಅನ್ ಬ್ರಾಂಡೆಡ್ ಕಾರ್ಬೋನೇಟ್ ವಾಟರನ್ನು ದಾಳಿ ನಡೆಸಿದ ವೇಳೆಯಲ್ಲಿ, ಮಹಾನಗರ ಪಾಲಿಕೆಯ ಪರಿಸರ ಇಂಜಿನಿಯರ್ ಮತ್ತು ನೈರ್ಮಲ್ಯ ನಿರೀಕ್ಷಕರು ಹಾಗೂ ಆರೋಗ್ಯ ಅಧಿಕಾರಿಗಳು ಕೆಲವು ಅಂಗಡಿಕಾರರಿಗೆ ಮತ್ತು ಕಾರ್ಖಾನೆಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ರಾಯಚೂರು ಮಹಾನಗರ ಪಾಲಿಕೆಯಿಂದ ರಾಜಕಾಲುವೆ ಸ್ವಚ್ಛತೆ ಕಾರ್ಯ ನಡೆದ ವೇಳೆ ಸುಮಾರು 20 ಟನ್ ಪ್ಲಾಸ್ಟಿಕ್ ಪೌಚ್ ಮತ್ತು ಪ್ಲಾಸ್ಟಿಕ್ ಬಾಟಲ್ ಶೇಖರಣೆಯಾಗಿದೆ. ಇದು ಅತ್ಯಂತ ಖೇದದ ಸಂಗತಿಯಾಗಿದೆ.ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿದಲ್ಲಿ ಕಠಿಣ ಕಾನೂನುಕ್ರಮ ಜರುಗಿಸಲಾಗುವುದು ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿಡಿಲು ಬಡಿದು ಮೂರು ಎತ್ತು ,ಹಸು ಸಾವು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿವೆ.ಅಂತಹ ಕಾರ್ಖಾನೆಗಳು ಕೂಡಲೇ ಎಚ್ಚೆತ್ತುಕೊಂಡು ನಿಷೇಧಿತ ಪ್ಲಾಸ್ಟಿಕ್ ನಿರ್ಮಾಣ ಮತ್ತು ಮಾರಾಟವನ್ನು ಕೈಬಿಡಬೇಕು ಎಂದು ದಾಳಿ ವೇಳೆ ಅಧಿಕಾರಿಗಳು ತಿಳಿವಳಿಕೆ ನೀಡಿದರು.
ಲಾಭವನ್ನೇ ಮುಖ್ಯವಾಗಿಸಿಕೊಂಡು ಕೆಲವು ಕಾರ್ಖಾನೆಗಳು ಮತ್ತು ಅಂಗಡಿಕಾರರು ನಿಷೇಧಿತ ಪ್ಲಾಸ್ಟಿಕ ಬಾಟಲ್ ಮತ್ತು ಪೌಚನಲ್ಲಿ ನೀರು ಶೇಖರಿಸಿ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ನೀರಿನ ಸ್ಯಾಂಪಲ್ ಪರೀಕ್ಷಿಸದೇ ಹಾಗೂ ನೀರಿನ ಗುಣಮಟ್ಟದ ಪರಿಶೀಲಿಸದೇ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರು ಬಾಟಲಿಯ ನೀರು ಬಳಸಬೇಕು. ಇನ್ನುಳಿದಂತೆ ಅನಧೀಕೃತ ಕಂಪನಿಗಳ ಬಾಟಲಿ ನೀರನ್ನು ಬಳಸಕೂಡದು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
