ರಾಯಚೂರು | ಗುಡಿಸಲು ತೆರವುಗೊಳಿಸುವ ಮುನ್ನ ಬಡಜನರಿಗೆ ಪುನರ್ವಸತಿ ಕಲ್ಪಿಸಬೇಕು: ಸಿಪಿಐಎಂಎಲ್

Date:

Advertisements

ರಾಯಚೂರು ಜಿಲ್ಲೆಯ ಸಿಂಧನೂರು ಸರ್ಕಾರಿ ಆಹಾರ ಗೋದಾಮು ಪಕ್ಕದಲ್ಲಿ ಬಡವರು ಗುಡಿಸಲು ಹಾಕಿಕೊಂಡು ಹಲವು ವರ್ಷಗಳಿಂದ ಬದುಕು ಸಾಗಿಸುತ್ತಿರುವ ಬಡ ಜನರಿಗೆ ಪುನರ್ವಸತಿ ಕಲ್ಪಿಸದೆ ಏಕಾಏಕಿ ತೆರವುಗೊಳಿಸುವುದಕ್ಕೆ ತಾಲೂಕು ಆಡಳಿತ ಮುಂದಾಗಿರುವುದು ಖಂಡನೀಯ ಎಂದು ಸಿಪಿಐ(ಎಂಎಲ್) ರೆಡ್ ಸ್ಟಾರ್ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ನಿತೀಶ್ ಕೆ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದರು.

ರಾಯಚೂರು ಜಿಲ್ಲೆಯ ಸಿಂಧನೂರು ಮುಖ್ಯ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಒತ್ತುವರಿ ತೆರವುಗೊಳಿಸಲು ಬೆಂಗಳೂರು ಭೂ ಕಬಳಿಕೆ ನಿಷೇಧ ರಾಜ್ಯ ನ್ಯಾಯಾಲಯದ ಆದೇಶ ನೀಡಿದ ನಂತರ, ರಸ್ತೆ ಒತ್ತುವರಿಯನ್ನು ತೆರವುಗೊಳಿಸಿದೆ. ಇದರ ಬೆನ್ನಲ್ಲೇ ಸಿಂಧನೂರು ಸರ್ಕಾರಿ ಆಹಾರ ಗೋದಾಮು ಜಾಗದ ಪಕ್ಕದಲ್ಲಿ 12ಕ್ಕೂ ಅಧಿಕ ಪರಿಶಿಷ್ಟ ಪಂಗಡ(ಎಸ್‌ಟಿ) ಜನಾಂಗದ ಕೂಲಿ ಕಾರ್ಮಿಕ ಕುಟುಂಬಗಳು ಸುಮಾರು 40 ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿವೆ. ಈಗ ತೆರವುಗೊಳಿಸಲು ರಾಯಚೂರು ಜಿಲ್ಲಾ ಆಹಾರ ಇಲಾಖೆ ಜನವರಿ 20ಕ್ಕೆ ಗಡುವು ನೀಡಿದೆ. ಅಕ್ರಮವಾಗಿ ನಿರ್ಮಿಸಿಕೊಂಡಿರುವ ಅಂಗಡಿಗಳಿಗೆ ನೋಟಿಸ್ ನೀಡದೆ, ಬದುಕಿಗಾಗಿ ಜೋಪಡಿ ಚಪ್ಪರದ ಸೂರು ಕಟ್ಟಿಕೊಂಡಿರುವ ತಟ್ಟಿಗೆ ನೋಟಿಸ್ ಅಂಟಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಸದರಿ ಬಡ ಕೂಲಿಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸದೆ ಏಕಾಏಕಿ ಬಂದು ಗುಡಿಸಲುಗಳನ್ನು ತೆಗೆಯಿರಿ ಎಂದು ವಾರ್ನಿಂಗ್ ಮಾಡಿ ನೋಟಿಸ್ ಹಾಕಿದ್ದಕ್ಕೆ ಜನರು ದಿಗ್ಭ್ರಮೆಯಾಗಿದ್ದಾರೆ. ಕಳೆದ 45-50 ವರ್ಷಗಳಿಂದ ಸಿಂಧನೂರು ಕ್ಷೇತ್ರದ ಅಧಿಕಾರ ನಡೆಸಿದವರು (ಮುನ್ಸಿಪಾಲಿಟಿಯಿಂದ-ಶಾಸಕರು-ಮಂತ್ರಿವರೆಗೆ) ಬೇರೆಕಡೆ ಹಕ್ಕುಪತ್ರ ಕೊಡುತ್ತೇವೆಂದು ದೇವರ ಮೇಲೆ ಆಣೆ-ಪ್ರಮಾಣ ಮಾಡಿದ ಮಹಾಶಯರು ಈಗ ಮಾಯವಾಗಿದ್ದಾರೆ. ಆದರೆ ಈ ಸಮಯದಲ್ಲಿ ಯಾರೂ ಕೂಡಾ ನೆರವಿಗೆ ಬಾರದೆ, ಪುನರ್ವಸತಿಗೆ ಮುಂದಾಗದೆ ಬೀದಿಗೆ ತಳ್ಳಿ ಕೈ ಸವರಿಸುವ ಹಂತದಲ್ಲಿ ರಾಯಚೂರು ಆಹಾರ ಇಲಾಖೆ ಮತ್ತು ಸಿಂಧನೂರು ತಾಲೂಕು ಆಡಳಿತ ಸಜ್ಜಾಗಿದೆ. ನಮಗೆ ಪುನರ್ವಸತಿ ಕಲ್ಪಿಸುವವರೆಗೆ ಜಾಗ ಬಿಟ್ಟು ಕದಲುವುದಿಲ್ಲ” ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

Advertisements

“ಸುಮಾರು ವರ್ಷಗಳಿಂದ ಸಿಂಧನೂರು ನಗರಸಭೆಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದರೂ ಕೂಡಾ ನಮಗೆ ನಿವೇಶನ ಒದಗಿಸಿಲ್ಲ. ಹೋಟೆಲ್ ಕೆಲಸ, ಸಣ್ಣ-ಪುಟ್ಟ ವ್ಯಾಪಾರ, ಮನೆಗೆಲಸ ಮಾಡಿ ಬದುಕುತ್ತಿರುವ ನಮ್ಮನ್ನು ಇದ್ದಕ್ಕಿದ್ದಂತೆ ಎತ್ತಂಗಡಿ ಮಾಡಿದರೆ ನಾವು ಎಲ್ಲಿಗೆ ಹೋಗಿ ಜೀವನ ಮಾಡುವುದು. ನಾವಿದ್ದ ಸ್ಥಳದಲ್ಲಿಯೇ ನಮಗೆ ನಿವೇಶನ ಹಕ್ಕುಪತ್ರ ಕೊಡಿ ಅಥವಾ ಬೇರೆ ಜನವಸತಿ ಪ್ರದೇಶದಲ್ಲಿ ನಮಗೆ ಪುನರ್ವಸತಿ ನೀಡಬೇಕು. ಅಲ್ಲಿಯವರೆಗೆ ಯಾವ ಕಾರಣಕ್ಕೂ ನಮ್ಮನ್ನು ತೆರವುಗೊಳಿಸದಂತೆ ಆಹಾರ ಇಲಾಖೆ ನಿಗಮಕ್ಕೆ ಸೂಕ್ತ ನಿರ್ದೇಶನ ನೀಡಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಮಠಾಧೀಶರು, ರಾಜಕಾರಣಿಗಳು ಇರುವವರೆಗೂ ಜಾತಿ ನಿರ್ಮೂಲನವಾಗುವುದಿಲ್ಲ: ಸಾಹಿತಿ ಡಾ. ಬಿ ಎಲ್ ವೇಣು

ಸಂಘಟನಾ ರಾಜ್ಯ ಸಮಿತಿ ಸದಸ್ಯರು ಎಂ ಗಂಗಾಧರ, ಜಿ ಅಮರೇಶ, ಹೆಚ್ ಆರ್ ಹೊಸಮನಿ, ಜಿಲ್ಲಾ ಸಮಿತಿ ಸದಸ್ಯ ಎಂ ನಿರಂಜನ್ ಕುಮಾರ, ತಾಲೂಕು ಸಮಿತಿ ಸದಸ್ಯರು ರಾಯಚೂರು ಸಿಪಿಐ(ಎಂಎಲ್)ರೆಡ್ ಸ್ಟಾರ್ ಹನುಮಂತಪ್ಪ ಗೋಡಿಹಾಳ, ಉಪಾಧ್ಯಕ್ಷರು ಕರ್ನಾಟಕ ರೈತ ಸಂಘ ಎಐಕೆಕೆಎಸ್ ಹಾಗೂ ರಾಜು ನಾಯಕ ಸಂತ್ರಸ್ತ ಕುಟುಂಬದವರಾದ, ಹನುಮಂತಮ್ಮ, ಹೊನ್ನಮ್ಮ, ಯಮನೂರಿ, ಲಕ್ಶ್ಮೀ, ಅಯ್ಯಮ್ಮ, ಲತಾ, ಮಲ್ಲಮ್ಮ, ಚನ್ನಮ್ಮ, ಯಮನಮ್ಮ, ಅಂಬಮ್ಮ, ಈರಮ್ಮ, ಶಿವಲಿಂಗಮ್ಮ, ಶರಣಮ್ಮ, ಯಲ್ಲಮ್ಮ, ಶಂಕ್ರಮ್ಮ, ಶ್ಯಾಮಮ್ಮ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X