ಶಕ್ತಿನಗರದ ವಿದ್ಯುತ್ ನಿಗಮದ ಘಟಕ–3 ರಲ್ಲಿ ಇಂದು ಸಂಜೆ 5 ಗಂಟೆ ಸುಮಾರು ಆಕಸ್ಮಿಕವಾಗಿ ಚಿಮಣಿ ಏಣಿ ಬಿದ್ದ ಘಟನೆ ನಡೆದಿದ್ದು ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಘಟನೆಯಾಗುವ ಸಮಯದಲ್ಲಿ ಸಿಬ್ಬಂದಿ ಅಥವಾ ಕಾರ್ಮಿಕರು ಯಾರೂ ಇರಲಿಲ್ಲದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಮುಕ್ಕುಂದಾ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಸೌಲಭ್ಯಗಳ ಅಭಾವ – ದಲಿತ ಸೇನೆ ಒತ್ತಾಯ
ಪ್ರಾಥಮಿಕ ಮಾಹಿತಿಯ ಪ್ರಕಾರ, ಬಿದ್ದ ಚಿಮಣಿ ಏಣಿ ಹಳೆಯದಾಗಿದ್ದು, ನಿರಂತರ ಮರುಪೂರೈಕೆ ಹಾಗೂ ನಿರ್ವಹಣೆಯ ಅವಶ್ಯಕತೆ ಇತ್ತು. ಹೀಗೆ ಇನ್ನೂ ಕೆಲವು ಚಿಮಣಿ ಏಣಿಗಳು ಶಿಥಿಲಗೊಂಡಿವೆ ಯಾವಾಗ ಬೀಳುತ್ತವೆ ಎಂದು ಗೊತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಕಾರಣಕ್ಕೆ ದುರ್ಘಟನೆ ಸಂಭವಿಸಿದೆ ಎಂದು ಕಾರ್ಮಿಕರು ತಿಳಿಸಿದರು.
