ದೇಶದ ಜನರಿಗೆ ತಪ್ಪು ಮಾಹಿತಿ ನೀಡಿ ದಾರಿತಪ್ಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆಯನ್ನು ಹಿಂಪಡೆಯಬೇಕೆಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಭಾಪತಿ ವಿ.ಆರ್. ಸುದರ್ಶನ ಆಗ್ರಹಿಸಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ದುರುದ್ದೇಶದಿಂದ ರಾಜ್ಯದಲ್ಲಿ ಪ್ರಚಾರ ಸಭೆಗಳಲ್ಲಿ ಮಾತನಾಡುವ ಮೂಲಕ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂರಿಗೆ ಹಿಂದುಳಿದ ವರ್ಗ ಮೀಸಲಾತಿ ನೀಡಿರುವ ಮೈಸೂರು ಒಡೆಯರ ಕಾಲದಿಂದಲೂ ನಡೆದು ಬಂದಿದೆ. ಮಿಲ್ಲರ್ ಸಮಿತಿ, ಹಾವನೂರು ಸಮಿತಿ ಸೇರಿ ಶಾಶ್ವತ ಹಿಂದುಳಿದ ಆಯೋಗ ರಚಿಸಿ ಶಿಫಾರಸ್ಸುಗಳಮೇಲೆ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
ಸಮಾಜಿಕ ಮತ್ತು ಶೈಕ್ಷಣಕ ಹಿಂದುಳಿಯುವಿಕೆ ಆಧಾರ ಮೇಲೆ ನಿರ್ಧಾರ ಕೈಗೊಂಡಿದೆ. ಆದರೆ, ನರೇಂದ್ರ ಮೋದಿರುವರಿಗೆ ಸತ್ಯಗೊತ್ತಿದ್ದರೂ ತಪ್ಪು ಮಾಹಿತಿ ಪ್ರಧಾನಿ ಹುದ್ದೆಯಲ್ಲಿದ್ದು ನೀಡಿದ್ದಾರೆ. ಸುಪ್ರಿಂಕೋರ್ಟ ತೀರ್ಪನಿಂದ ಶೇ.50 ಮೀಸಲಾತಿ ಹೆಚ್ಚಿಸದೇ ಇರುವಾಗ ಆರ್ಥಿಕ ಹಿಂದುಳುವಿಕೆ ಆಧಾರದ ಮೇಲೆ ಇಡಬ್ಯೂಎಲ್‌ಎಸ್ ಶೇ.10 ಮೀಸಲು ನೀಡಿ ಸುಪ್ರಿಂಕೋರ್ಟಿನ ತೀರ್ಪು ಉಲ್ಲಂಘಿಸಿದರು. ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಲುಮನಮೋಹನ ಸಿಂಗ್ ಪ್ರಧಾನಿಯಾಗಿದ್ದ ಸಾಮಾಜಿಕ ಮತ್ತು ಹಿಂದುಳಿಕೆ ಸಮೀಕ್ಷೆ ನಡೆಸಲು ಪ್ರಾಯೋಗಿಕ ಯೋಜನೆ 23 ಕೋಟಿ ರೂ. ವೆಚ್ಚದಲ್ಲಿ ರೂಪಿಸಲಾಗಿತ್ತು ಎಂದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲಾಯಿತೆ ಹೊರತು ಜಾತಿಗಣತಿಯಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿಯರುವ ನೂರು ಬಾರಿ ಸುಳ್ಳು ಹೇಳಿ ಸತ್ಯವಾಗಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.
ಸಂವಿಧಾನಕ್ಕೆ ಅಗೌರವ ತರುವ ರೀತಿಯಲ್ಲಿ ಮಾತನಾಡಿರುವದು ಅವರ ಹುದ್ದೆಗೆ ಶೋಭೆತರುವಂತಹಲ್ಲ. ಕಾಂಗ್ರೆಸ್ ಏಲ್ಲಿಯೂ ಮುಸ್ಲಿಂರಿಗೆ ಮಾತ್ರ ಹಿಂದುಳಿದ ವರ್ಗದ ಮೀಸಲಾತಿ ನೀಡುವುದಾಗಿ ಹೇಳಿಲ್ಲ. ತಪ್ಪಾಗಿ ಅರ್ಥೈಸಲಾಗುತ್ತಿದೆ. ಮಾಂಗಲ್ಯ ಕಿತ್ತುಕೊಳ್ಳುತ್ತಿರುವದಾಗಿ ನರೇಂದ್ರ ಮೋದಿ ಆಡುತ್ತಿರುವ ಮಾತು ಹತಾಶೆಯ ಸಂಕೇತವಾಗಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಜನರ ಬದುಕು ಕಟ್ಟುವ ಕೆಲಸ ಮಾಡಿದೆ. ನರೇಂದ್ರ ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸಿ ಡಿಜಿಟಲ್ ಕ್ರಾಂತಿ ಮಾಡಿದ್ದು ರಾಜೀವಗಾಂಧಿಯವರು. ತಪ್ಪು ಮಾಹಿತಿ ನಿಡುವ ಮೂಲಕ ಜನರಿಗೆ ತಪ್ಪು ದಾರಿ ತಪ್ಪಿಸುತ್ತಿದ್ದಾರೆ. ಅವರುಹೇಳಿದ್ದ ಯಾವುದೇ ಭರವಸೆ ಇಡೇರಿಲ್ಲ. ಕಪ್ಪು ಹಣ, ನೋಟು ಅಮಾನ್ಯೀಕರಣ, ರೈತರ ಆದಾಯ ದ್ವಿಗುಣ ಸೇರಿದಂತೆ ಏನಾಗಿವೆ ಎಂದರು.
ಆದರೆ, ಅಂಬಾನಿ, ಅದಾನಿ ಆಸ್ತಿ ಕಳೆದ ಹತ್ತು ವರ್ಷದಲ್ಲಿ ದುಪ್ಪಟ್ಟು ಮಾಡಿದ್ದಾರೆ. 2024ರಲ್ಲಿಅಂಬಾನಿ ಆಸ್ತಿ 236 ಲಕ್ಷ ಡಾಲರ್ ಇದ್ದದ್ದು, 2024ರವೇಳೆಗೆ 11,690 ಕೋಟಿ ಡಾಲರ್‌ಗ ಏರಿದೆ. ಅದಾನಿಯವರು ಆಸ್ತಿ 2014ರಲ್ಲಿ 800 ಕೋಟಿ ಡಾಲರ್ ಇದ್ದದ್ದು, 2024r ವೇಳೆಗೆ 8650 ಡಾಲರ್‌ಗೆ ಏರಿದೆ. ಇಷ್ಟೊಂದು ಆಸ್ತಿ ಹೆಚ್ಚಳವಾಗಲು ಕಾರಣವೇನು ಎಂದರು.
ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾಮಾಡಿರುವ ನರೇಂದ್ರ ಮೋದಿಯವರು ದೇಶದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರಗಾಲ ವಿದ್ದರು ಎನ್‌ಡಿಆರ್‌ಎಫ್ ಅನುದಾನ ನೀಡುವಲ್ಲಿ ಮಲತಾಯಿ ದೋರಣೆ ಅನುಸರಿಸುತ್ತಿದ್ದಾರೆ. ಅವರಿಗೆ ರಾಜ್ಯದ ಜನರಲ್ಲಿ ಮತ ಕೇಳುವ ನೈತಿಕತೆ ಇಲ್ಲ. ಕಲ್ಯಾಣ ಕರ್ನಾಟಕ ಉದ್ದಾರ ಮಾಡುವುದಾಗಿ ಹೇಳುವವರು ಅವರು ಈ ಭಾಗಕ್ಕೆಕೊಟ್ಟಿದ್ದೇನು ಎಂದು ಪ್ರಶ್ನಿಸಿದರು.
ಏಮ್ಸ್ ಮಂಜೂರಾತಿ ಎರಡು ವರ್ಷದಿಂದ ಸತತ ಹೋರಾಟ ನಡೆಸಿದರೂ ಕೇಳುತ್ತಿಲ್ಲ. ಈ ಭಾಗಕ್ಕೆ 371(ಜೆ) ಜಾರಿಗೊಳಿಸಿದ್ದು ಕಾಂಗ್ರೆಸ್ ಸರ್ಕಾರ. ಮಲ್ಲಿಕಾರ್ಜುನ ಖರ್ಗೆಯವರ ಪರಿಶ್ರಮದಿಂದ ಜಾರಿಯಾಗಿದೆ ಎಂದರು.
ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಸಮರ್ಥ ನಾಯಕತ್ವ ಇದೆ. ಬಿಜೆಪಿಯವರಿಗೆ ಕಾಂಗ್ರೆಸ್ ವಿರುದ್ದ ಸಂಬಂಧ ಇಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ವೆಂಕಟರಮಣಪ್ಪ ಮಾತನಾಡಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವುಕುಮಾರ ನೇತೃತ್ವದಲ್ಲಿ ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿ ನಾವು ಜನರಿಗೆ ಕೊಟ್ಟ ಭರವಸೆಯನ್ನು ತೋರಿಸಿದ್ದೇವೆ. ಬಿಜೆಪಿಯವರ ಯಾವ ಭರವಸೆಯೂ ಇಡೇರಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಪಾರಸಮಲ್ ಸುಖಾಣ, ಜಿ.ಬಸವರಾಜರೆಡ್ಡಿ, ಅಮರೇಗೌಡ ಹಂಚಿನಾಳ, ಆಂಜಿನೇಯ ಕುರುಬದೊಡ್ಡಿ, ಅಸ್ಲಂ ಪಾಷಾ, ಅಬ್ದುಲ್ ಕರಿಂ, ರುದ್ರಪ್ಪ ಅಂಗಡಿ, ಡಾ.ರಜಾಕ ಉಸ್ತಾದ ಸೇರಿದಂತೆ ಅನೇಕರಿದ್ದರು.
