ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.
ಗ್ರಾಮ ಆಡಳಿತ ಕಚೇರಿಗಳಿಗೆ ಮೂಲ ಸೌಲಭ್ಯ ಒದಗಿಸಬೇಕು, ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಬೇಕು, ಸೇವಾ ನಿಯಮಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ನೀಡಬೇಕು ಹಾಗೂ ಅಂತರ್ ಜಿಲ್ಲಾ ವರ್ಗಾವಣೆಯ ಕೆಸಿಎಸ್‌ಆರ್ ನಿಯಮ 16ಎ ಉಪಖಂಡ(2)ನ್ನು ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಆಧಾರ ಸೀಡಿಂಗ್‌ನಲ್ಲಿ ಪತ್ತೆಯಾಗಿರುವ ಇ-ಪೌತಿ ಖಾತಾ ಆಂದೋಲನ ಚಾಲನೆ ಕೈಬಿಡಬೇಕು, ಚಿಕ್ಕಮಗಳೂರು ಜಿಲ್ಲೆಯ 30 ಗ್ರಾಮ ಆಡಳಿತ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿ ತಡೆದು, ನೈಸರ್ಗಿಕ ನ್ಯಾಯ ತತ್ವಗಳನ್ನು ಹಾಗೂ ಎಲ್ಲಾ ನಿಗಮಗಳನ್ನು ಉಲ್ಲಂಘಿಸಿ ಹೊರಡಿಸಿದ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ನೌಕರರ ಅನುಕಂಪದ ನೇಮಕಾತಿ ಹುದ್ದೆಯ ವೃಂದಮತ್ಯಯ ನೇಮಕಾತಿ ತಿದ್ದುಪಡಿ, ಜೀವ ಹಾನಿಯಾಗುವ ಅಧಿಕಾರಿಗೆ 50 ಲಕ್ಷ ಪರಿಹಾರ, ಆಪತ್ತಿನ ಭತ್ಯೆ, ಪೋಲಿಸ್ ಇಲಾಖೆಯಲ್ಲಿರುವಂತೆ ಒಂದು ತಿಂಗಳ ಹೆಚ್ಚುವರಿ ವೇತನ ಹಾಗೂ ಪ್ರಯಾಣ ಭತ್ಯೆ 500 ದಿಂದ 5000 ಸಾವಿರಕ್ಕೆ ಹೆಚ್ಚಳ, ಅಧಿಕಾರಿಗಳ ಜೇಷ್ಠತೆಯನ್ನು ರಾಜ್ಯ ಮಟ್ಟದ ಜೇಷ್ಠತೆಯನ್ನಾಗಿ ಪರಿಗಣಿಸಬೇಕು, ಮನೆಹಾನಿ ವರದಿ ಪ್ರಾಥಮಿಕ ವರದಿ ನೀಡುವ ಅಧಿಕಾರ, ಬೆಳೆ ಸಮೀಕ್ಷೆ, ಬೆಳೆ ಹಾನಿ ಪರಿಹಾರದ ಕೆಲಸವನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ನೀಡಬೇಕು, ಮ್ಯುಟೇಷನ್ ಅವಧಿ ವಿಸ್ತರಿಸಬೇಕು ಹಾಗೂ ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಫೆ.13 ರಂದು ಜಿಲ್ಲಾ ರೈತ ಸಮಾವೇಶ
ಈ ವೇಳೆ ಶ್ರೀನಿವಾಸ, ಬಸವರಾಜ, ಹಸನ್, ಸುರೇಂದ್ರ ಪಾಟೀಲ್, ಮಂಜುನಾಥ, ಹನುಮೇಶ, ಅಮರೇಶ, ಸುಭಾಷ್, ರಮೇಶ್, ಗಂಗಪ್ಪ, ದೇಶಪಾಂಡೆ, ವಾಜೇಂದ್ರ ಇದ್ದರು.
