ಲಿಂಗಸೂಗೂರು ತಾಲೂಕಿನ ರೊಡಲಬಂಡಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕಡ್ಡೋಣ ತವಗ ಸೇರಿದಂತೆ ಎಲ್ಲ ಗ್ರಾಮಗಳ ಸಮಗ್ರ ಅಭವೃದ್ಧಿಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ), ಕರ್ನಾಟಕ ಪ್ರಾಂತ ರೈತ ಸಂಘಟನೆ (ಕೆಪಿಆರ್‌ಎಸ್), ಕರ್ನಾಟಕ ಪ್ರಾಂತ ಕೂಲಿಕಾರ ಸಂಘಟನೆ ಸಂಘಟನೆಗಳ ಕಾರ್ಯಕರ್ತರು ಲಿಂಗಸೂಗೂರು ಎಸಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, “ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಪ್ರತಿಭಟನೆ ಬಗ್ಗೆ ಅಧಿಕಾರಿಗಳಿಗೆ, ಶಾಸಕರಿಗೆ ಮಾಹಿತಿ ನೀಡಿದ್ದರೂ, ಸ್ಥಳಕ್ಕೆ ಬಂದಿಲ್ಲ. ಶಾಸಕರು ವೋಟು ಖರೀದಿ ಮಾಡಿ ಚುನಾವಣೆಯಲ್ಲಿ ಗೆದ್ದಿರಬಹುದು. ಆದರೆ, ಮತದಾರರ ಕುಂದು ಕೊರತೆ ಆಲಿಸದ ಈ ಭ್ರಷ್ಟ ಶಾಸಕ ನಮಗೆ ಬೇಕೆ?” ಎಂದು ಕಿಡಿಕಾರಿದರು.
ಪ್ರತಿಭಟನಾ ಸ್ಥಳಕ್ಕೆ ಸಹಾಯಕ ಆಯುಕ್ತರು ಶಿಂಧೆ ಅವಿನಾಶ್, ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಅಮರೇಶ, ಜೆಸ್ಕಾಂನ ಎಇಇ ಕೆಂಚಪ್ಪ ಬಾವಿಮನಿ, ಕೆಕೆ ಎಸ್ಆರ್ ಟಿಸಿ ಡಿಪೋ ವ್ಯವಸ್ಥಾಪಕ ಆರ್. ವಾಯ್ ವನಸೋರೆ, ಪ್ರಧಾಮಂತ್ರಿ ಗ್ರಾಮ ಸಡಕ್, ಯೋಜನೆಯ ಉಪ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ಮನವಿ ಸ್ವೀಕರಿಸಿದರು. ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪೂರು, ಸಿಐಟಿಯು ಮುಖಂಡ ಮಹಮ್ಮದ್ ಹನೀಫ್, ಕೆ ಪಿ ಆರ್ ಎಸ್ ನ ಮುಖಂಡ ಶಿವಣ್ಣ ಆಂಜನೇಯ, ಶಿವಕುಮಾರ್ ಪಲ್ಲೇ ದ್, ಬಸವರಾಜ ಯಡ್ಡಳ್ಳಿ, ಮುತ್ತಣ್ಣ ಕಂಬಳಿ, ಬಾಬಾ ಜಾನಿ, ಅಲ್ಲಾಭಕ್ಷ, ರಂಗಪ್ಪ ದೊರೆ ದುರ್ಗಪ್ಪ ಪಾಟೀಲ್, ದಾವಲ್ ಸಾಬ್, ಶಂಕರ್, ಸಿದ್ದಣ್ಣ, ರುದ್ರಗೌಡ, ಶಂಭುನಾಥ್, ಡಿವೈಎಫ್ಐ ಮುಖಂಡ ಕಾಶಿಪತಿ, ತೋಟೆಂದ್ರ ಅಂಗಡಿ, ಕೂಲಿಕಾರ ಸಂಘಟನೆಯ ನಾಗರತ್ನಾ ನೀರಲಕೇರಿ, ಮಹಿಬೂಬ್ ನಿಂಗಪ್ಪ ಎಂ., ಸೇರಿದಂತೆ ಅನೇಕರು ಉಪಸ್ಥಿತರಿದ್ದರು.