ಮಾದಕ ವಸ್ತುಗಳ ಸೇವನೆಯಿಂದ ಕುಟುಂಬಗಳು ಸರ್ವನಾಶವಾಗುತ್ತಿದ್ದು, ಅಲ್ಲದೆ ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಸಹಾಯಕ ಆಯುಕ್ತ ಅವಿನಾಶ್ ಶಿಂಧೆ ಹೇಳಿದರು.
ರಾಯಚೂರು ಜಿಲ್ಲೆ ಲಿಂಗಸೂಗೂರು ಪೋಲೀಸ್ ಠಾಣೆ ವತಿಯಿಂದ ಪಟ್ಟಣದ ಸರ್ಕಾರಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಮಾರಕ ದ್ರವ್ಯಗಳ ದುಷ್ಪರಿಣಾಮಗಳ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
“ಮಾರಕ ವಸ್ತುಗಳ ಉತ್ಪಾದನೆ ಮತ್ತು ಮಾರಾಟ ಜಾಲಗಳ ಪತ್ತೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಯುವಕರು ತಮ್ಮ ಭವಿಷ್ಯದ ಹೆಚ್ಚಿನ ಗಮನವಿಟ್ಟು ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು” ಎಂದರು.
ಡಿವೈಎಸ್‌ಪಿ ದತ್ತಾತ್ರೇಯ ಕಾರ್ನಾಡ್ ಮಾತನಾಡಿ, “ಕೆಟ್ಟ ಚಟಗಳನ್ನು ನಾವೇ ಅನುಭವಿಸಿ ಪಾಠ ಕಲಿಯಲಿಕ್ಕೆ ಆಗುವುದಿಲ್ಲ. ಈ ಜೀವನ ತುಂಬಾ ಚಿಕ್ಕದು ಮಾರಕ ವಸ್ತುಗಳ ಸೇವನೆಯಿಂದ ಬೇರೆಯವರಿಗೆ ಆದ ದುಷ್ಪರಿಣಾಮಗಳನ್ನು ಅರಿತು ಅದರಿಂದ ನಾವು ದೂರ ಇರಬೇಕು. ಸದ್ಯದ ಆರೋಗ್ಯದಿಂದ ಈ ಜೀವನಕ್ಕೆ ಬೆಲೆ ಬರುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಶ್ರೀಕಾಂತ್ ಪೂಜಾರಿ ಬಂಧನಕ್ಕೆ ವಿರೋಧ; ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ನಿರ್ಧಾರ
ಈ ಸಂದರ್ಭದಲ್ಲಿ ಸಿಪಿಐ ಪುಂಡಲಿಕ ಪಟಾರ್ ಮಸ್ಕಿ ಸಿಪಿಐ ಬಾಲಚಂದ್ರ ಸಿಬ್ಬಂದಿಗಳಾದ ನಾಗರಾಜ, ಈರಣ್ಣ, ಅಂಬರೀಶ, ಸಿದ್ದಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮುರುಗೇಂದ್ರ ಹಾಗೂ ಅಲ್ಲಮಪ್ರಭು ಮತ್ತು ಸ್ವಾಮಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಶಿಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಇದ್ದರು.
ವರದಿ : ಶಾಮಿದ್ ಅಲಿ