ನಿಧಿ ಆಸೆಗಾಗಿ ದೇವಸ್ಥಾನದ ಕಟ್ಟೆಯನ್ನು ಧ್ವಂಸಗೊಳಿಸಿದ ಘಟನೆ ರಾಯಚೂರು ನಗರದ ಕೋಟೆ ಆವರಣದಲ್ಲಿರುವ ಕೋದಂಡರಾಮ ದೇವಾಲಯದ ಬಳಿ ನಡೆದಿದೆ.
ಶನಿವಾರ ತಡರಾತ್ರಿ ರಾಯಚೂರು ನಗರದ ಗಂಗಾನಿವಾಸ ಬಡಾವಣೆ ವ್ಯಾಪ್ತಿಯ ಬೆಟ್ಟದಗೇರಿಯ ಪುರಾತನ ಕೋದಂಡರಾಮ ದೇವಾಲಯದ ಕಟ್ಟೆಯನ್ನು ನಿಧಿಯ ಆಸೆಗಾಗಿ ಪೂಜಾರಿಯೇ ಧ್ವಂಸಗೊಳಿಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿಡಿಲು ಬಿದ್ದು ; ವಾಹನ ಭಸ್ಮ
ಹಿಂದೇಯು ಕೂಡ ನಿಧಿ ಆಸೆಗಾಗಿ ಇಂತಹ ಕೃತ್ಯ ನಡೆದಿತ್ತು ಮತ್ತೆ ಮರು ಕಳಿಸಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.
ದೇವಸ್ಥಾನ ಅರ್ಚಕ ಶಕ್ತಿಸಿಂಗ್ ಕಟ್ಟೆಯನ್ನು ಒಡೆದು ಗಣೇಶ ಮೂರ್ತಿಯನ್ನು ಕೂರಿಸಲು ಯೋಚಿಸಿದ್ದ ಇದನ್ನೇ ನೆಪವಾಗಿಸಿಕೊಂಡು ನಿಧಿಗಾಗಿ ದೇವಸ್ಥಾನ ಕಟ್ಟೆಯನ್ನು ಧ್ವಂಸಗೊಳಿಸಲು ಯತ್ನಿಸಿದ್ದಾನೆ ಎಂದು ಬಜರಂಗದಳದ ಕಾರ್ಯಕರ್ತರು ಹಾಗೂ ಕೆಲ ಸ್ಥಳೀಯ ಯುವಕರು ಆರೋಪಿಸಿದ್ದಾರೆ.
ಸದರ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
