ರಾಯಚೂರು ತಾಲೂಕಿನ ಉಡಮಗಲ್ ಹಾಗೂ ಮರ್ಚಾಟ್ಹಾಳ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಮಲ್ಲಮ್ಮ(50) ಉಡಮಗಲ್ ಹಾಗೂ ಹನುಮಂತ(55) ಮರ್ಚಾಟ್ಹಾಳ ಮೃತ ದುರ್ದೈವಿಗಳು ಎನ್ನಲಾಗಿದೆ.
ಮಲ್ಲಮ್ಮ ಅವರು ಕುರಿ ಮೇಯಿಸಲು ಗ್ರಾಮದ ಹೊರವಲಯದಲ್ಲಿ ಹೋದಾಗ ಗುಡುಗು ಸಹಿತ ಮಳೆ ಪ್ರಾರಂಭವಾಗಿದೆ. ಮನೆ ಕಡೆಗೆ ಮರಳಿ ಬರುವಾಗ ಸಿಡಿಲು ಬಡಿದಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಂತ್ರಾಲಯ ಪ್ರವಾಸಕ್ಕೆಂದು ತೆರಳಿದ್ದ ಯುವಕರಿಬ್ಬರು ನೀರುಪಾಲು
ಹನುಮಂತ ಅವರು ಹೊಲದಲ್ಲಿ ಜೆಸಿಬಿ ಮೂಲಕ ಬದುತೆಗೆಸುವ ಕಾರ್ಯದಲ್ಲಿದ್ದ ವೇಳೆ ಗಾಳಿ ಮಳೆ ಶುರುವಾಗಿದೆ. ಇದರಿಂದ ಮರದಡಿ ಆಶ್ರಯ ಪಡೆಯಲು ನಿಂತಾಗ ಸಿಡಿಲು ಬಡಿದಿದೆ ಎನ್ನಲಾಗಿದೆ.
ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ತಾಲೂಕಿನ ಎರಡು ಗ್ರಾಮದಲ್ಲಿ ಸಿಡಿಲು ಬಡಿದ ಸುದ್ದಿ ಕೇಳಿ ಸುತ್ತಮುತ್ತ ಗ್ರಾಮದವರು ಬೆಚ್ಚಿ ಬಿದ್ದಿದ್ದಾರೆ.
“ಗ್ರಾಮಸ್ಥರು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡಬೇಕು” ಎಂದು ಒತ್ತಾಯವಾಗಿದೆ.
ಎರಡು ಗ್ರಾಮಕ್ಕೂ ಯರಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.