ಕರ್ನಾಟಕ ಭೂ ಮಂಜೂರಾತಿಗೆ ನಿಯಮಗಳ ಅಡಿಯಲ್ಲಿ ರಾಯಚೂರು ತಾಲೂಕಿನಲ್ಲಿ ಹಂಚಿಕೆಗೆ ಲಭ್ಯವಿರುವ ಭೂಮಿಯ ವಿವರವನ್ನು ಕೂಡಲೇ ಪ್ರಕಟಿಸಬೇಕು ಎಂದು ಕರ್ನಾಟಕ ರೈತ ಸಂಘ ಕಂದಾಯ ಇಲಾಖೆಗೆ ಮನವಿ ಪತ್ರ ಸಲ್ಲಿಸಿದೆ.
1969 ಉಪನಿಯಮ 3 ರ ಅನ್ವಯ ಪ್ರಕಾರ ಪ್ರತಿ ವರ್ಷವೂ ಹಂಚಿಕೆಗೆ ತಾಲೂಕಿನಲ್ಲಿ ಲಭ್ಯವಿರುವ ಸರ್ಕಾರಿ ಭೂಮಿಯ ಪಟ್ಟಿಯನ್ನು ತಯಾರಿಸಿ ಭೂ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ದುರ್ಬಲ ಸಮುದಾಯದಗಳಿಗೆ ಇರುವ ಭೂಮಿಯ ವಿವರ ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಮನವಿಯ ಮೂಲಕ ಆಗ್ರಹಿಸಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ಸಾಗುವಳಿ ಭೂಮಿಯಿಂದ ವಂಚಿತರಾದ ದಲಿತ ಸಮುದಾಯಗಳಿಗೆ ಭೂಮಿ ನೀಡುವ ಸರ್ಕಾರದ ಮಹತ್ವಾಕಾಂಕ್ಷಿಯಾದ ಎಲ್ಲ ಯೋಜನೆಗಳ ಮೇಲೆ ಇದರ ಅಡ್ಡ ಪರಿಣಾಮ ಬೀರುತ್ತಿದೆ. 2024-25 ನೇ ಸಾಲಿನಲ್ಲಿ ಮಸ್ಕಿ ತಾಲೂಕಿನಲ್ಲಿ ಹಂಚಿಕೆ ಮಾಡಲು ಲಭ್ಯ ಇರುವ ಒಟ್ಟು ಸರಕಾರಿ ಭೂಮಿಯ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಹಾಗೂ ಪ್ರತಿಯನ್ನು ನಮಗೆ ಒದಗಿಸಬೇಕೆಂದು ಎಂದು ರೈತ ಸಂಘಟನೆ ಮನವಿ ಮಾಡಿದರು.
ಈ ವೇಳೆ ಸಂತೋಷ್ ಹಿರೇದಿನ್ನಿ, ಮಾರುತಿ ಜಿನ್ನಾಪೂರ, ಅಮರೇಶ ಪಾಮನಕಲ್ಲೂರು, ಬಾಲಸ್ವಾಮಿ ಹೂವಿನಬಾವಿ, ತಿರುಪತಿ ಮಸ್ಕಿ, ಮಾಳಪ್ಪ ಹೂವಿನಬಾವಿ, ನಿಂಗಪ್ಪ, ಆದಯ್ಯ ಸ್ವಾಮಿ ಹರ್ವಾಪುರ, ಶ್ರೀನಿವಾಸ, ಇತರರು ಇದ್ದರು.
