ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಾತರಕಿ ರಸ್ತೆಯಲ್ಲಿ ಪರಿಶಿಷ್ಟರ (ದಲಿತರ) ಸ್ಮಶಾನಕ್ಕಾಗಿ ಕಾಯ್ದಿರಿದ ಜಮೀನನ್ನು ಕೆಲವರು ಅತಿಕ್ರಮಿಸಿದ್ದು, ಇತರೆ ಜಾತಿಯ ಮುಖಂಡರು ಶವ ಸಂಸ್ಕಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪರಿಶಿಷ್ಟರಿಗೆ ಕಾಯ್ದಿರಿಸಲಾದ ಜಮೀನನಲ್ಲಿ ಅತಿಕ್ರಮಿಸಿದ್ದಲ್ಲದೇ ಇದು ಸರ್ಕಾರಿ ಸ್ಮಶಾನ ಭೂಮಿ ಎಂದು ತಪ್ಪು ಮಾಹಿತಿಯನ್ನು ಹರಡಿಸಲಾಗುತ್ತಿದೆ. ಇದರಿಂದ ಗ್ರಾಮದಲ್ಲಿ ಅಶಾಂತಿ ಸೃಷ್ಟಿಯಾಗಿದೆ ಎಂದು ಆರೋಪಿಸಿದರು. ಕೂಡಲೇ ಇದನ್ನು ತಡೆದು ಸ್ಮಶಾನ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಲಿಂಗಸುಗೂರು | ಕೃಷಿ ಉಪ ನಿರ್ದೇಶಕರ ಕಚೇರಿ ಸಿಂಧನೂರಿಗೆ ಸ್ಥಳಾಂತರ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ
ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಏಗನೂರು, ಕಾರ್ಯಾಧ್ಯಕ್ಷ ರಂಗಪ್ಪ ಅಸ್ಕಿಹಾಳ, ಮಾನ್ವಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸದಾನಂದ, ಶಾಂತಕುಮಾರ, ತಿಮ್ಮಪ್ಪ ಪಾಲ್ಗೊಂಡಿದ್ದರು.
