ರೈಲ್ವೆ ನಿಲ್ದಾಣದಲ್ಲಿರುವ ವಿಶೇಷ ಚೇತನರ ಶೌಚಾಲಯ ಸೇರಿ ನಾನಾ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಅಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್ ವತಿಯಿಂದ ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಲಾಯಿತು.
ರೈಲ್ವೆ ನಿಲ್ದಾಣದಲ್ಲಿರುವ ವಿಶೇಷ ಚೇತನ ವ್ಯಕ್ತಿಗಳ ಶೌಚಾಲಯವನ್ನು ದುರಸ್ತಿಗೊಳಿಸಬೇಕು, ನೀರು, ವಿದ್ಯುತ್ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿ ವಿಶೇಷ ಚೇತನ ಸ್ನೇಹಿಯಾಗಿ ಪರಿವರ್ತಿಸಬೇಕು. ರೈಲ್ವೆ ನಿಲ್ದಾಣದಲ್ಲಿರುವ ಬ್ಯಾಟರಿ ಚಾಲಿತ ವಾಹನಗಳಿಗೆ ಚಾಲಕರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ರೈಲ್ವೆ ನಿಲ್ದಾಣದಲ್ಲಿ ಸುಮಾರು 4 ರಿಂದ 5 ವ್ಹೀಲ್ ಚೇರ್‌ಗಳ ವ್ಯವಸ್ಥೆಯನ್ನು ಮಾಡಬೇಕು. ರೈಲ್ವೆ ನಿಲ್ದಾಣದಲ್ಲಿರುವ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಆದಷ್ಟು ಬೇಗನೇ ಪ್ರಾರಂಭ ಮಾಡಬೇಕು. ವಿಶೇಷ ಚೇತನರಿಗೆ ಎಲ್ಲಾ ರೀತಿಯ ಸೌಲಭ್ಯಗಳ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಸಂಪೂರ್ಣವಾಗಿ ನಿಲ್ದಾಣವನ್ನು ವಿಶೇಷ ಚೇತನ ಸ್ನೇಹಿಯಾಗಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಸಚಿವ ಜಮೀರ್ ವಿರುದ್ಧ ಅವಹೇಳನಾಕಾರಿ ಪದಬಳಕೆ: ಪುನೀತ್ ಕೆರೆಹಳ್ಳಿ ವಿರುದ್ಧ ಎಫ್ಐಆರ್
ಈ ಸಂದರ್ಭದಲ್ಲಿ ಅಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್ ರಾಯಚೂರು ತಾಲೂಕು ಅಧ್ಯಕ್ಷ ಹನುಮೇಶ, ವೆಂಕಟೇಶ, ಗುಂಡಪ್ಪ ಗೌಡ, ಹೊನ್ನೂರಯ್ಯ, ನರಸಪ್ಪ, ಲಕ್ಷ್ಮಣ, ರಾಮಪ್ಪ ಸೇರಿದಂತೆ ಇತರರು ಇದ್ದರು.
