ಕೆರೆಯಲ್ಲಿ ಈಜಲು ಹೋಗಿ ಕುರಿಗಾಹಿ ಮೃತಪಟ್ಟ ಘಟನೆ ಲಿಂಗಸೂಗೂರು ತಾಲ್ಲೂಕು ಹಟ್ಟಿ ಚಿನ್ನದ ಗಣಿ ವ್ಯಾಪ್ತಿಯ ಹಿರೇ ನಗನೂರು ಗ್ರಾಮದ ಹೊರವಲಯದ ಕ್ಯಾಸರ್ ಹಾಳ ಕರೆಯಲ್ಲಿ ನಡೆದಿದೆ.
ಮೌನೇಶ್ ಶಿವಣ್ಣ (18) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.ಕುರಿಗಳನ್ನು ಕಾಯುತ್ತಾ ಕೆರೆ ಬಳಿ ತೆರಳಿದ ಕುರಿಗಾಹಿ ಯುವಕರು ಈಜಲು ಮುಂದಾಗಿದ್ದಾರೆ. ಈ ವೇಳೆ ಮೌನೇಶ್ ಕೂಡ ನೀರಿನಲ್ಲಿ ಈಜಲು ಮುಂದಾದಾಗ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಸ್ ನಿಲ್ಲಿಸಲು ವಿದ್ಯಾರ್ಥಿಗಳಿಂದ ಪ್ರತಿಭಟನೆ
ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತು.ಘಟನಾ ಸ್ಥಳಕ್ಕೆ ಹಟ್ಟಿ ಪೊಲೀಸ್ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
