ಮಾನ್ವಿ ತಾಲ್ಲೂಕಿನ ಬಾಗಲವಾಡ ಗ್ರಾಮದ ಮುಖ್ಯರಸ್ತೆ ಕನಕ ಶ್ರೀ ಪೆಟ್ರೋಲ್ ಬಂಕ್ ನಿಂದ ಶಿವರಾಜ ಮಂತ್ರಿಕ ಇವರ ಮನೆಯವರೆಗೆ ಸುಮಾರು 2 ಕಿಲೋಮೀಟರವರೆಗೆ 2 ಕೋಟಿ ಅನುದಾನ ಬಿಡುಗಡೆಯಾಗಿ ಎರಡು ವರ್ಷ ಕಳೆದರೂ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಗ್ರಾಮಸ್ಥರು ಬೇಸತ್ತು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಿದರು.
ಬಾಗಲವಾಡ ಗ್ರಾಮದ ಮುಖ್ಯ ರಸ್ತೆಯು ತೆಗ್ಗು , ಗುಂಡಿಗಳಿಂದ ಮಾರ್ಪಟ್ಟಿದೆ.ತಾಲ್ಲೂಕಿಗೆ ಹೋಗುವ ಮುಖ್ಯ ರಸ್ಥೆಯಾಗಿದ್ದು ಸಾವಿರಾರು ವಾಹನಗಳು ಓಡಾಡುತ್ತವೆ.ರಾತ್ರಿ ವೇಳೆ ತೆಗ್ಗು ಗುಂಡಿಗಳಿಗೆ ಬಿದ್ದು ಹಲವು ಭಯಾನಕ ಅಪಘಾತಗಳು ಸಂಭವಿಸಿವೆ.
ಮಳೆ ಬಂದಾಗ ರಸ್ತೆಯು ಕೆಸರು ಗದ್ದೆಯಂತಾಗುತ್ತದೆ ಸಾರ್ವಜನಿಕರಿಗೆ ರಸ್ತೆ ಓಡಾಡಲು ಕಷ್ಟವಾಗಿದೆ. ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ಸಮಸ್ಯೆಯಾಗಿ ಅಹಿತಕರ ಘಟನೆಗಳು ನಡೆದಿವೆ ಎಂದರು.
ಎರಡು ವರ್ಷಗಳ ಹಿಂದೆ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹಾಗೂ ಪಿ.ಡಬ್ಲ್ಯೂ.ಡಿ ಅಧಿಕಾರಿಗಳಾದ ಶಾಮೀಲಪ್ಪ ಗ್ರಾಮದ ಮುಖಂಡರು ಸೇರಿಕೊಂಡು ಗುದ್ದಲಿ ಪೂಜೆ ನೆರವೇರಿಸಿದರು ಇಲ್ಲಿಯವರೆಗೂ ಕಾಮಗಾರಿಯು ಪ್ರಾರಂಭವಾಗಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಲವು ದಿನಗಳ ಹಿಂದೆ ವಿವಿಧ ಸಂಘಟನೆಗಳು ಸೇರಿ ಪ್ರತಿಭಟನೆ ಹಮ್ಮಿಕೊಂಡಾಗ ಸಂಬಂಧಪಟ್ಟ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ವಾರದೊಳಗೆ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದ್ದರು.ಹಲವು ಬಾರಿ ಗಮನಕ್ಕೆ ತಂದರು ಸ್ಪಂದಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಸಂಬಂಧ ಪಟ್ಟ ಅಧಿಕಾರಿಗಳು ಕಾಮಗಾರಿ ಪ್ರಾರಂಭಿಸದೆ ಕಾಲಹರಣ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ಕೂಡಲೆ ಅಮಾನತ್ತುಗೊಳಿಸಬೇಕು , ತಕ್ಷಣ ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಲ್ಲನ ಗೌಡ್ ಪೊಲೀಸ್ ಪಾಟೀಲ್ , ಗುಂಡಪ್ಪ ಸಾಹುಕಾರ, ಬೀರಪ್ಪ ಸಾಹುಕಾರ , ಬಸವರಾಜ್ ಮೋಟಿ , ನಾಗರಾಜ್ ನಾಯ್ಕ ,ಮೌನೇಶ್ ಕೋರಿ , ಜಗದೀಶ್ ,ನಾಗರಾಜ್ ಹಿಂದಿನ ಮನೆ , ಇನ್ನಿತರರು ಹಾಜರಿದ್ದರು.
