ತುಂಗಭದ್ರಾ ಎಡದಂಡೆ ನಾಲೆಯ 85ನೇ ವಿತರಣಾ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ನೂರಾರು ರೈತರು ಸಿಂಧನೂರು -ರಾಯಚೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಮಾನ್ವಿ ಪಟ್ಟಣದಲ್ಲಿ ರಸ್ತೆ ತಡೆದು ರೈತರು ಹೊಲದಲ್ಲಿ ಸಾವಿರಾರು ಹಣ ಖರ್ಚು ಮಾಡಿ ಬೆಳೆಗಳು ಬೆಳೆದಿದ್ದಾರೆ. 85ನೇ ವಿತರಣಾ ಕಾಲುವೆಗೆ ಸರಿಯಾಗಿ ನೀರು ಬಾರದೆ ಇರುವುದರಿಂದ ಬೆಳೆಗಳು ಒಣಗಿ ತೊಂದರೆ ಅನುಭವಿಸುತ್ತಿದ್ದೇವೆ ಎಂದು ತಿಳಿಸಿದರು.
ತುಂಗಭದ್ರಾ ಎಡದಂಡೆ ನಾಲೆಯ ಕಾಲುವೆಗಳಲ್ಲಿ ಸಮರ್ಪಕವಾಗಿ ನೀರು ಹರಿಸಬೇಕು. ಮಳೆ ಬಂದು ತುಂಗಭದ್ರಾ ಆಣೆಕಟ್ಟು ಭರ್ತಿಯಾಗಿ ಹೆಚ್ಚಿನ ನೀರನ್ನು ನದಿಗೆ ಹರಿಯ ಬಿಡಲಾಗಿದೆ. ಕಾಲುವೆಗೆ ನೀರು ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧಪಟ್ಟ ಇಲಾಖೆಗೆ ಗಮನಕ್ಕೆ ತಂದರೂ ನೀರಾವರಿ ನಿಗಮದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ ನೀರಾವರಿ ನಿಗಮದ ಎಇಇ ದಾವೂದ್ ರೈತರ ಮನವಿಗೆ ಸ್ಪಂದಿಸಿ ಕಾಲುವೆಗೆ ನೀರು ಹರಿಸುವಂತೆ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಜನಸೇವಾ ಮುಖ್ಯಸ್ಥ ಜಾವೀದ್ ಖಾನ್ , ಸುರೇಶ್ , ರಾಮಕೃಷ್ಣ , ಜಲಾಲ್ ಸಾಬ್ ,ಸೇರಿ ನೂರಾರು ರೈತರು ಇನ್ನಿತರರು ಹಾಜರಿದ್ದರು.
