ರೈಲು ಮೂಲಕ ಅಕ್ರಮವಾಗಿ ಸಿಎಚ್ ಪೌಡರ್ ಮಿಶ್ರಿತ ಶೇಂದಿ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಪೋಲಿಸರು ದಾಳಿ ನಡೆಸಿ, ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಬಸವರಾಜ, ಶ್ರೀಕಾಂತ್, ಶಿವರಾಜ್, ತಿಮ್ಮಪ್ಪ, ನರಸಮ್ಮ ಮತ್ತು ಮಾರೆಪ್ಪ ಬಂಧಿತ ಎಂದು ಗುರುತಿಸಲಾಗಿದೆ.
ತೆಲಂಗಾಣದ ಕೃಷ್ಣಾದಿಂದ ರಾಯಚೂರಿಗೆ ಬೀದರ್- ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಅಕ್ರಮ ಸಿಎಚ್ ಪೌಡರ್ ಕಲಬೆರಕೆ ಶೇಂದಿಯನ್ನು ಬಾಟಲಿಗಳಲ್ಲಿ ತುಂಬಿಕೊಂಡು ಸಾಗಣೆ ಮಾಡುತ್ತಿದ್ದರು. ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆ ದಾಳಿ ಮಾಡಿ 150 ಲೀಟರ್ ಸೆಂದಿಯನ್ನ ಜಪ್ತಿ ಮಾಡಿಕೊಂಡು 6 ಜನರನ್ನು ಬಂಧಿಸಿದ್ದಾರೆ.
ಅಬಕಾರಿ ಪೋಲಿಸರು ಖಚಿತ ಮಾಹಿತಿ ಮೇರೆಗೆ ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದರು, ಈ ವೇಳೆ ಸುಮಾರು 150 ಲೀಟರ್ ಸಿಎಚ್ ಪೌಡರ್ ಮಿಶ್ರಿತ ಶೇಂದಿಯನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳ ವಿರುದ್ದ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಇದನ್ನು ಓದಿದ್ದೀರಾ? ಸಚಿವ ಜಮೀರ್ ವಿರುದ್ಧ ಅವಹೇಳನಾಕಾರಿ ಪದಬಳಕೆ: ಪುನೀತ್ ಕೆರೆಹಳ್ಳಿ ವಿರುದ್ಧ ಎಫ್ಐಆರ್
ರಾಯಚೂರಿನ ವಿವಿಧ ಬಡಾವಣೆಯ ಮನೆಗಳಲ್ಲಿ ಅಕ್ರಮವಾಗಿ ಶೇಂದಿ ಸಂಗ್ರಹಿಸಿಟ್ಟು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿರುವುದು ಕಂಡು ಬಂದಿದೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಅಬಕಾರಿ ಪೋಲಿಸರು ಸಿಬ್ಬಂದಿಗಳು ಇದ್ದರು.
