ಭಾರತ ಸಂವಿಧಾನ ರಕ್ಷಣೆಗಾಗಿ ಸ್ಲಂ ಜನರ ಮತ ಜಾಗೃತಿ ಜಾಥಾಕ್ಕೆ ರಾಜ್ಯ ಸ್ಲಂ ಸಂಚಾಲಕ ಎ.ನರಸಿಂಹಮೂರ್ತಿ ಚಾಲನೆ ನೀಡಿ ಕರಪತ್ರ ಮತ್ತು ಸ್ಟಿಕ್ಕರ್ ಬಿಡುಗಡೆಗೊಳಿಸಿದರು.
ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ವತಿಯಿಂದ ರಾಯಚೂರಿನ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜಿಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಎ.ನರಸಿಂಹಮೂರ್ತಿ ಮಾತನಾಡಿದರು.
ಬಡವರ ಆದಾಯ ಕಡಿಮೆಯಾದರೂ ಖರ್ಚು ಜಾಸ್ತಿ ಮಾಡುತ್ತಿದ್ದಾರೆ ಎಂಬ ಮೋದಿ ಗಣಿತವನ್ನು ನೋಡಿ ಇದು ವಿಶ್ವ ಗುರುವಿನ ವಿಕಸಿತ ಗಣಿತ ಸಂವಿಧಾನದ ಹಕ್ಕುಗಳ ಖಾಸಗೀಕರಣವಾಗಿ, ಕರ್ತವ್ಯಗಳು ಜಾಗತಿಕರಣವಾಗಿವೆ. 10 ವರ್ಷಕ್ಕೆ ಮೋದಿ ಆಡಳಿತದಲ್ಲಿ ಸ್ಲಂ ಜನರಿಗೆ ನೀಡಿದ ಕೊಡುಗೆ ಶೂನ್ಯವಾಗಿದೆ. ಪಿಎಂಎಐ ಯೋಜನೆ ಬಡತನ ವಿರೋಧಿಯಾಗಿದ್ದು, ದೇಶದಲ್ಲಿ 40 ಕೋಟಿ ಜನರಿಗೆ ಮನೆ ಇಲ್ಲ. ಆದರೆ, 10 ವರ್ಷಗಳಲ್ಲಿ 2 ಕೋಟಿ ಜನರ ಲೂಟಿ 1.50 ಲಕ್ಷ ಸಬ್ಸಿಡಿ ನೀಡಿ ಇದರಲ್ಲಿ 1.30 ಲಕ್ಷ ಲೂಟಿ ಮಾಡಿದ್ದಾರೆ ಎನ್ನುವ ವಾದ ಸ್ಲಂ ಜನರದ್ದು ಎಂದರು.
ನಮಗೆ ಬೇಕಾಗಿರುವುದು ಮೋದಿ ಗ್ಯಾರಂಟಿಗಳಲ್ಲ, ಸಂವಿಧಾನದ ಗ್ಯಾರಂಟಿಗಳು. ಇಂದು ದೇಶದಲ್ಲಿ ಅಭಿವೃದ್ಧಿ ಆಯಾಮದಲ್ಲಿ ಚುನಾವಣೆ ನಡೆಯದೆ 18ನೇ ಲೋಕಸಭೆಗೆ ವ್ಯಕ್ತಿ ಕೇಂದ್ರವಾದ ಚುನಾವಣೆ ನಡೆಯುತ್ತಿರುವುದು ವಿಪರ್ಯಾಸವಾಗಿದೆ. ಕಾಂಗ್ರೆಸ್‌ನ ನ್ಯಾಯಾಪತ್ರ, ಸಾಮಾಜಿಕ ನ್ಯಾಯದ, ಸಂವಿಧಾನ ಖಾತ್ರಿ ಪ್ರತಿಪಾದಿಸಿದೆ ಹಾಗೂ ನಮ್ಮ ಜವಾಭ್ದಾರಿಗಳಾದ ವಸತಿ ಹಕ್ಕು, ಆರೋಗ್ಯದ ಹಕ್ಕು ಎಸ್.ಸಿ/ಎಸ್.ಟಿ. ಜನಸಂಖ್ಯೆವಾರು, ನಗರ ಉದ್ಯೋಗ ಕಾತ್ರಿ, ಜಾತಿಗಣತಿ, ಮಹಿಳಾ ಮೀಸಲಾತಿ, ಕಾರ್ಮಿಕರ ಹಕ್ಕುಗಳನ್ನು ಜಾರಿಗೊಳಿಸಿ. ಆದ್ದರಿಂದ ಈ ಬದಲಾವಣೆಯನ್ನು ಸ್ಲಂ ಜನಾಂದೋಲನ ಸಂಘಟನೆ ಸಂಪೂರ್ಣವಾಗಿ ಕಾಂಗ್ರೆಸನ್ನು ಬೆಂಬಲಿಸುತ್ತದೆ ಎಂದರು.
ನಾಳೆಯಿಂದ ಪ್ರತೀ ಸ್ಲಂಗಳಲ್ಲಿ ವಾಸಿಸುವವರಿಗೆ ಈ ಸಂದೇಶ ನೀಡಿ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಸಂವಿಧಾನವನ್ನು ರಕ್ಷಿಸಬೇಕು. ಸಂವಿಧಾನ ರಕ್ಷಣೆಯಾದರೆ ಈ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕುಗಳು ರಕ್ಷಣೆಯಾಗಿ ಸಮ ಸಮಾಜದ ಮಾನವೀಯತೆ ಮೌಲ್ಯದ ದೇಶ ಕಟ್ಟುವಲ್ಲಿ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಪಿ. ಅನಿಲ್‌ಕುಮಾರ್‌ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜನಾರ್ಧನ ಹಳ್ಳಿಬೆಂಚಿ, ನೂರ್‌ಜಾನ್, ನಾಗರಾಜ್ ಜ್ಯೋತಿ ಕಾಲೋನಿ, ವೆಂಕಟೇಶ ಭಂಡಾರಿ, ಶರಣಬಸವ ರೆಡ್ಡಿ, ನಾಮ ನಿರ್ದೇಶನ ಸದಸ್ಯರಾದ ಮಣ ಕಂಠ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೇವಿನಗರ, ಜ್ಯೋತಿ ಕಾಲೋನಿ, ಅಂಬೇಡ್ಕರ್ ನಗರ, ಮೈಲಾರನಗರ, ಉರುಕುಂದಿ ಈರಣ್ಣ ನಗರ, ಹರಿಜನವಾಡ, ಹೊಸೂರು, ಯಕ್ಲಾಸಪೂರ ಹಾಗೂ ಇನ್ನಿತರ ಸ್ಲಂ ನಿವಾಸಿಗಳ ಭಾಗವಹಿಸಿದ್ದರು.
