ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಬೆಂಗಳೂರು ಬೈಪಾಸ್ ರಸ್ತೆಯ ಕಾಮಗಾರಿ ತುಂಬಾ ನಿಧಾನಗತಿಯಲ್ಲಿ ಹಾಗೂ ಅಪೂರ್ಣವಾಗಿ ಅರ್ಧಕ್ಕೆ ನಿಂತಿದ್ದು, ಆದಷ್ಟು ಬೇಗ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಸೋಲಿಡಾರಿಟಿ ಯೂತ್ ಮೂಮೆಂಟ್ ವತಿಯಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಈ ರಸ್ತೆಯಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಓಡಾಟ ಮಾಡುತ್ತಿದ್ದಾರೆ. ತ್ತೀಚೆಗೆ ಮಾನ್ವಿ ತಾಲೂಕಿನಲ್ಲಿ ನಡೆದ ಭೀಕರ ಅಪಘಾತ ಘಟನೆ ರಸ್ತೆ ಗುಂಡಿಗಳಿಂದ ಸಂಭವಿಸಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು. ಆ ರೀತಿ ಘಟನೆಯಾಗದಂತೆ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಆ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸೋಲಿಡಾರಿಟಿ ಯೂತ್ ಮೂಮೆಂಟ್ ಕಾರ್ಯಕರ್ತರು ಒತ್ತಾಯಿಸಿದರು.
ತಾಲೂಕಿನ ಹಲವು ಕಡೆಗಳಲ್ಲಿ ಹದಗೆಟ್ಟ ರಸ್ತೆಗಳಿವೆ. ಅವುಗಳನ್ನು ಕೂಡಲೇ ದುರಸ್ತಿ ಮಾಡಬೇಕು. ಮುಖ್ಯ ರಸ್ತೆಗೆ ಇರುವ ಶಾಲೆ, ಆಸ್ಪತ್ರೆ, ಹತ್ತಿರ ಎಚ್ಚರಿಕೆ ಬೋರ್ಡ್ ಅಳವಡಿಸಿ, ರಸ್ತೆ ಕಾಮಗಾರಿ ಹೆಸರಿನಲ್ಲಿ ಬೋಗಸ್ ಬಿಲ್ ಬರೆದು ಸರ್ಕಾರದ ಹಣ ಲೂಟಿ ಮಾಡಿದ್ದಾರೆ. ಇದರ ಬಗ್ಗೆ ಸಿ.ಒ.ಡಿ ತನಿಖೆಯಾಗಬೇಕು. ಲೋಕೋಪಯೋಗಿ ಇಲಾಖೆಯಲ್ಲಿ ಅನೇಕರು ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಥವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ ? ರಾಯಚೂರು | ಸಂಪೂರ್ಣ ಹದಗೆಟ್ಟ ರಸ್ತೆ: ಶೀಘ್ರವೇ ದುರಸ್ತಿ ಪಡಿಸುವಂತೆ ಗ್ರಾಮಸ್ಥರು, ವಿದ್ಯಾರ್ಥಿಗಳ ಆಗ್ರಹ
ಈ ಸಂದರ್ಭದಲ್ಲಿ ಸೋಲಿಡಾರಿಟಿ ಯೂತ್ ಮೂಮೆಂಟ್ ಅಧ್ಯಕ್ಷ ಅಮ್ಮದ್ ಅಲಿ, ಮಹಾಂತೇಶ್ ಸ್ಪಂದನ ಶಾಲೆ, ದಾನಯ್ಯ ಜ್ಞಾನ ಗಂಗಾ ಶಾಲೆ, ಸೇವಿಯರ್ ಜೇಮ್ಸ್, ಅಬ್ದುಲ್ ಸಲಾಂ, ಅಬ್ದುಲ್ ನಾಯುಮ್, ಮೊಹಮ್ಮದ್, ಸೈಯದ್ ಮುನೀರ್, ಬಾಬಾ ಕೆ ಬಿ ಎನ್, ಅಹಮದ್ ಮೆಡಿಕಲ್, ಜಾವೇದ್, ಖಾಜಾ ಗೀರ್ಣಿ, ಪಾಷಾ ಗಿರ್ಣಿ, ನವಾಬ್, ಸಲೀಂ ಯೂನುಸ್, ಮೆಹಬೂಬ್, ರಾಜು, ಸದ್ದಾಂ, ವಾಹೀದ್, ಖಲೀಲ್, ಖಾಲಿದ್, ಆನಂದ, ಶಂಕರಪ್ಪ ಸೇರಿದಂತೆ ಇದ್ದರು.
