ರಾಯಚೂರಿನ ಲಿಂಗಸೂಗೂರು ತಾಲೂಕು ಹಟ್ಟಿ ಚಿನ್ನದ ಗಣಿ ಪಟ್ಟಣದ ಕ್ರೀಡಾಂಗಣದಲ್ಲಿ ಎರಡು ಬಾರಿ ರಾಷ್ಟ್ರ ಧ್ವಜ ಹಾರಿಸಿರುವ ಘಟನೆ ನಡೆದಿದೆ. ಗಣರಾಜ್ಯೋತ್ಸವದ ಹಿನ್ನೆಲೆ ನಡೆದ 76ನೇ ಧ್ವಜಾರೋಹಣದ ವೇಳೆ ಧ್ವಜವನ್ನು ಸರಿಯಾದ ಕ್ರಮದಲ್ಲಿ ಕಟ್ಟದ ಕಾರಣ ಘಟನೆ ಸಂಭವಿಸಿದೆ ಎಂದು ಹಟ್ಟಿ ಗಣಿ ಕಂಪನಿ ನಿರ್ದೇಶಕಿ ಶಿಲ್ಪಾ ಅಸಮಾಧಾನ ಹೊರಹಾಕಿದರು.
ಈ ವೇಳೆ ಎರಡು ಬಾರಿ ರಾಷ್ಟ್ರ ಗೀತೆ ಹಾಡಲಾಯಿತು. ಇದರಿಂದ ರಾಷ್ಟ್ರ ಧ್ವಜಕ್ಕೆ ಹಾಗೂ ರಾಷ್ಟ್ರಗೀತೆಗೆ ಅವಮಾನವಾಗಿದೆ ಎಂದು ರಾಷ್ಟ್ರ ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.
ಧ್ವಜಾರೋಹಣ ಮಾಡುವಾಗ ಆದ ಎಡವಟ್ಟಿನ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಗತಿಪರ ಮುಖಂಡರು ಹಾಗೂ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಕೃಷಿ ಉತ್ಪನ್ನಗಳ ಬೆಲೆ ಕುಸಿತ; ಪ್ರೋತ್ಸಾಹಧನ ನೀಡುವಂತೆ ರೈತರ ಒತ್ತಾಯ
ಈ ಹಿಂದೆ ಕೂಡ ಇದೇ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡುವ ವೇಳೆ ಅಡೆತಡೆ ಉಂಟಾಗಿತ್ತು. ಮತ್ತೆ ಅದೇ ಘಟನೆ ಮರುಕಳಿಸಿರುವುದನ್ನು ಖಂಡಿಸಿ ರಾಷ್ಟ್ರಾಭಿಮಾನಗಳು ಅಸಮಾಧಾನ ವ್ಯಕ್ತಪಡಿಸಿದರು.
