ರಾಯಚೂರು | ʼಇಂದ್ರಿಯ ನಿಗ್ರಹ ಮಾಡಿದರೆʼ ಕೃತಿ ಲೋಕಾರ್ಪಣೆ

Date:

Advertisements

ಹಿಂದುಳಿದ ಹಾಗೂ ಬಡತನ ಪ್ರದೇಶವಾಗಿರುವ ರಾಯಚೂರು ಜಿಲ್ಲೆಯಲ್ಲಿ ಕಳೆದ 70 ವರ್ಷಗಳಿಂದ ಸಾಹಿತ್ಯದ ಕೃಷಿ ನಿರಂತರವಾಗಿ ಬೆಳೆದು ಬಂದಿದೆ ಎಂದು ಹಂಪಿ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ವಿಜಯ ಪೂಣಚ್ಚ ಹೇಳಿದರು.

ರಾಯಚೂರಿನಲ್ಲಿ ಬಸವಕೇಂದ್ರ ಮಾನ್ವಿ, ಲೊಹೀಯಾ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು, ಎಚ್ ಎಸ್ ಪಾಟೀಲ ಮತ್ತು ಅಲ್ಲಮಪ್ರಭು ಪಾಟೀಲ ಬೆಟ್ಟದೂರು ಇವರ ಸಂಗಡಿಗರ ಸಮಿತಿ ಹಾಗೂ ಡಾ.ಬಸವಪ್ರಭು ಪಾಟೀಲರ ʼಇಂದ್ರಿಯ ನಿಗ್ರಹ ಮಾಡಿದರೆʼ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

“ಜಿಲ್ಲೆಯಲ್ಲಿ ಸಾಹಿತ್ಯ ಪರಂಪರೆ ಇಂದಿನದಲ್ಲ, ಇತಿಹಾಸವೇ ಇದೆ. ಸಾಮಾಜಿಕ ಹೋರಾಟಗಳೇ ಇದಕ್ಕೆ ನಿದರ್ಶನವಾಗಿವೆ. ರಾಜಕೀಯ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಲೇ ಇವೆ. ನಾವು ಹೆಚ್ಚು ಯಾವ ವಿಷಯಗಳ ಮೇಲೆ ಗಮನಹರಿಸುತ್ತೇವೆ. ಅವು ನಮ್ಮ ಸಾಮಾನ್ಯ ಜ್ಞಾನ ಹೆಚ್ಚಿಸುತ್ತವೆ” ಎಂದರು.

Advertisements

“ಶಾಂತರಸ, ಚನ್ನಬಸಪ್ಪ ಬೆಟ್ಟದೂರು, ನೀರಮಾನ್ವಿ ವೀರನಗೌಡ ಇವರು ಹಾಕಿದ ಬುನಾದಿಯ ಮೇಲೆ ಇನ್ನೂ ಅನೇಕ ಸಂಗಡಿಗರು ಸೇರಿ ಸಾಹಿತ್ಯದ ಕೃಷಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು” ಎಂದು ತಿಳಿಸಿದರು.

ಸಾಹಿತಿ ಅಮರೇಶ ನುಗಡೊಣ ಮಾತನಾಡಿ, “ಸಂಗಡಿಗರ ಸಮಿತಿಯು ಸಾಹಿತ್ಯ ಪರಂಪರೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಒತ್ತು ನೀಡಿ ಅನೇಕ ಬರಹಗಳನ್ನು ರಚಿಸಿದ್ದಾರೆ. ವಚನಗಳು, ರಗಳೆಗಳು, ಕೀರ್ತನೆಗಳು, ತತ್ವಪದಗಳೂ ಸೇರಿವೆ. ನವೋದಯ, ನವ್ಯ, ಪ್ರಗತಿಶೀಲ, ಸಾಹಿತ್ಯದ ಚಳುವಳಿ, ತಮ್ಮ ಕಾಲದ ಬಿಕ್ಕಟ್ಟನ್ನು ಎದುರಿಸಿ ಬರೆದಿರುವ ಬರಹಗಳಾಗಿವೆ” ಎಂದರು.

“ತಮ್ಮ ಕಾಲದ ಸಂಘರ್ಷಗಳು ಸಾಹಿತ್ಯದಂತಹ ಚಳಿವಳಿಗಳು ಬರಹಗಳು ಏಕಾಂಗಿಯಾಗಿ ಬರೆದಿಲ್ಲ. ಯಾರೂ ಸಹ ಬರೆದವರಿಲ್ಲ. ಸಮೂಹದ ಮೂಲಕ ಬಿಚ್ಚಿಟ್ಟಿದ್ದಾರೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಾರ್ನಾಡ್ ರಂಗೋತ್ಸವ; ‘ರಂಗ ಚಿಂತನೆ’ ಪುಸ್ತಕ ಬಿಡುಗಡೆ

ಈ ಸಂದರ್ಭದಲ್ಲಿ ಅಲ್ಲಮಪ್ರಭು ಪಾಟಿಲ್, ಡಾ.ಬಸವಪ್ರಭು ಪಾಟೀಲ ಬೆಟ್ಟದೂರು, ಅಯ್ಯಪ್ಪಯ್ಯ ಹುಡಾ, ಲೋಹಿಯಾ ಪ್ರತಿಷ್ಠಾನದ ಸಿ.ಚನ್ನಬಸವಣ್ಣ, ಡಾ.ಸರ್ವಮಂಗಳ ಸಕ್ರಿ, ಬೀಮನಗೌಡ ಇಟಗಿ ಇದ್ದರು.

ವರದಿ : ಹಫೀಜುಲ್ಲ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X