ಯರಗೇರಾ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜು.21 ರಂದು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಚಿವ ಶರಣಪ್ರಕಾಶ ಪಾಟೀಲ್ ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಅವರಿಗೆ ಮನವಿ ಸಲ್ಲಿಸಿದರು.
ಯರಗೇರಾ ಹೋಬಳಿಗೆ 19 ಗ್ರಾಮಪಂಚಾಯತಿಗಳು, 78 ಗ್ರಾಮಗಳನ್ನು ಒಳಗೊಂಡು ಹೆದ್ದಾರಿ ರಸ್ತೆಯಲ್ಲಿದ್ದು ನೂರಾರು ಗ್ರಾಮಸ್ಥರಿಗೆ ತಾಲ್ಲೂಕು ಕೇಂದ್ರವಾದರೆ ಅನುಕೂಲವಾಗುತ್ತದೆ. 2020 ರಿಂದ ತಾಲ್ಲೂಕು ಕೇಂದ್ರವನ್ನಾಗಿಸಲು ನಿರಂತರ ಹೋರಾಟ ನಡೆಸಿಕೊಂಡು ಬರಲಾಗಿದೆ. ಇತ್ತೀಚಿಗೆ ಯರಗೇರಾ ಗ್ರಾಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳಿಗೆ ಮನವಿ ಸಲ್ಲಿಸಿದರು ಸರ್ಕಾರದಿಂದ ಯಾವುದೇ ಸ್ಪಂದನೆ ಬಾರದೇ ಇರುವರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದಲಿತರಿಗೆ ಭೂಮಿ,ವಸತಿ ಹಕ್ಕುಪತ್ರ ನೀಡಲು ಒತ್ತಾಯ
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಮಹ್ಮದ್ ನಿಜಾಮುದ್ದೀನ್, ಸಂಚಾಲಕರಾದ ಬಸವರಾಜ ಹೂಗಾರ, ಮಾಜಿ ಜಿ.ಪಂ.ಉಪಾಧ್ಯಕ್ಷರಾದ ಜಾಫರ್ ಅಲಿ ಪಟೇಲ್, ಎ.ಪಿ.ಎಂ.ಸಿ.ಅಧ್ಯಕ್ಷ ಮಲ್ಲಿಕಾರ್ಜುನಗೌಡ, ವಿದ್ಯಾನಂದ ರೆಡ್ಡಿ, ಕೆ.ಲಕ್ಷೀಪತಿ, ಹುಲಗಯ್ಯ, ಮಹ್ಮದ್ ರಫಿ, ಮೂರ್ತಿಶೆಟ್ಟಿ, ಎಂ. ನಾರಾಯಣ, ಕೆ.ರಮೇಶ, ಜಗದೀಶ್ ರೆಡ್ಡಿ, ಶ್ರೀನಿವಾಸ ರೆಡ್ಡಿ, ಗುಜ್ಜಲ್ ತಾಯಪ್ಪ, ಉಬ್ಬಳ್ ಬಡೇಸಾಬ್, ಫಹೀಮ್ ಖತೀಬ್, ಈರೇಶ್ ಸ್ವಾಮಿ, ಮುಕ್ತಾರ್, ರಿಜ್ವಾನ್, ಮಹ್ಮದ್ ಸೇರಿದಂತೆ ಅನೇಕರಿದ್ದರು.