ಕಲ್ಯಾಣ ಕರ್ನಾಟಕದ ಶಾಲೆಗಳ ಅವ್ಯವಸ್ಥೆಯಿಂದ ಶಾಲೆಯಿಂದ ಮಕ್ಕಳು ಹೊರಗುಳಿಸುವ ಸಂಖ್ಯೆ ಹೆಚ್ಚುತ್ತಲಿದೆ. ಶಿಕ್ಷಕರ ಕೊರತೆಯಿಂದ ಶೂನ್ಯ ಶಾಲೆಗಳಾಗಿ ಅನೇಕ ಶಾಲೆಗಳನ್ನು ಮುಚ್ಚುವ ಕಾರ್ಯ ಸರ್ಕಾರವೇ ಮಾಡುತ್ತಿದೆ ಎಂದು ಶಿಕ್ಷಣ ಪ್ರೇಮಿ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸೈಯದ್ ಹಫೀಜುಲ್ಲಾ ಕಳವಳ ವ್ಯಕ್ತಪಡಿಸಿದರು.
ಹೈದ್ರಾಬಾದ ಕರ್ನಾಟಕ ಜನಾಂದೋಲನ ಕೇಂದ್ರ ಆಯೋಜಿಸಿದ್ದ ಹೈದ್ರಾಬಾದ ಕರ್ನಾಟಕ ಶೈಕ್ಷಣಿಕ ಪರಿಸ್ಥಿತಿ ಕತೆ, ವ್ಯಥೆ ಕುರಿತು ವಿಷಯ ಮಂಡನೆ ಮಾಡಿದರು.
ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ವ್ಯವಸ್ಥೆ ಅಧೋಗತಿಗೆ ತಳ್ಳಲಪಟ್ಟಿದೆ. ಶಾಲೆಗಳಲ್ಲಿ ಬೋಧಿಸುವ ಶಿಕ್ಷಕರೇ ಇಲ್ಲದೇ ಇರುವಾಗ ಗುಣಮಟ್ಟ ಶಿಕ್ಷಣ ನಿರೀಕ್ಷಿಸುವುದೇ ಹಾಸ್ಯಾಸ್ಪದ. ಸರ್ಕಾರಗಳು ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಮಂಡಳಿ ನೀಡಿ 5 ಸಾವಿರ ಕೋಟಿ ರೂ ಅನುದಾನ ನೀಡುವುದಾಗಿ ಹೇಳುತ್ತಲಿದೆ. ಆದರೆ ಇಂದಿಗೂ ಶಾಲೆಗಳ ಕೊಠಡಿಗಳ ಕೊರತೆಯೊಂದಿಗೆ ಬೋಧಿಸುವ ಶಿಕ್ಷಕರೆ ಇಲ್ಲ. ಜಿಲ್ಲೆಯೊಂದರಲ್ಲಿಯೇ 85 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದ ಶೂನ್ಯ ಶಿಕ್ಷಕರ ಶಾಲೆಗಳಿವೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ, ಶಿಕ್ಷಣ ಕಾಯ್ದೆ ಸೇರಿ ಅನೇಕ ಕಾಯ್ದೆಗಳನ್ನು ರೂಪಿಸಿದ್ದರು ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗಾಂಜಾ ಸೇವನೆ ಮೂವರು ಪೊಲೀಸ್ ವಶಕ್ಕೆ
ಸಾರ್ವಜನಿಕ ವರ್ಗಾವಣೆಯಲ್ಲಿ ಖಾಯಂ ಶಿಕ್ಷಕರನ್ನ ಕನಿಷ್ಟ ಮುನ್ನಚ್ಚರಿಕೆಯಿಲ್ಲದೇ ವರ್ಗಾಯಿಸಿರುವ ಪರಿಣಾಮ ಅತಿಥಿ ಶಿಕ್ಷಕರ ಮೇಲೆ ಶಾಲೆಗಳ ಅವಲಂಬಿತವಾಗಿವೆ. ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದೇ ಮಕ್ಕಳು ಶಾಲೆಗೆ ಬರುವದಾದರು ಹೇಗೆ ಎನ್ನುವದಕ್ಕೆ ಸರ್ಕಾರಗಳೇ ಉತ್ತರಿಸಬೇಕಿದೆ.ಸರ್ಕಾರ ಶಾಲೆಗಳ ಪರಸ್ಥಿತಿಯನ್ನು ಗಂಬೀರವಾಗಿ ಪರಿಗಣಿಸುತ್ತಿಲ್ಲ. ಇರುವ ಶಾಲೆಗಳಿಗೆ ಶಿಕ್ಷಕರನ್ನು ನೀಡದೇ ಹೊಸ ಹೊಸ ಶಾಲೆಗಳನ್ನು ಪ್ರಾರಂಭಿಸುವದಾಗಿ ಘೋಷಣೆ ಮಾಡುತ್ತಿದೆ. ಏಕೋಪಾಧ್ಯೇಯ ಶಾಲೆಗಳಿವೆ. ಇಲ್ಲಿನ ಶಿಕ್ಷಕರ ಕೊರತೆಯ ಬಗ್ಗೆ ಹೋರಾಟಗಾರರು ಪ್ರತಿಯೊಬ್ಬ ಶಿಕ್ಷಣ ಸಚಿವರು ಶಿಕ್ಷಕರ ನೇಮಕಾತಿ ಮಾಡುವದಾಗಿ ಹೇಳುತ್ತಾರೆ. ಆದರೆ ಟೆಟ್ ಪರೀಕ್ಷೆಯಲ್ಲಿ ಬೇಡಿಕೆ ಶಿಕ್ಷಕರು ದೊರೆಯದೇ ಇರುವ ಸ್ಥಿತಿಯಿದೆ ಎಂದರು.
ಅತಿಥಿ ಶಿಕ್ಷಕರ ನೇಮಕ ತಾತ್ಕಾಲಿಕ ವ್ಯವಸ್ಥೆ ಹೊರತು ಶಾಶ್ವತ ಸಮಸ್ಯೆಗೆ ನಿವಾರಣೆಯಾಗುವದಿಲ್ಲ.ಈ ಭಾಗದ ಶೈಕ್ಷಣಿಕ ಸಮಸ್ಯೆ ನಿವಾರಣೆಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ವೀರ ಹನುಮಾನವಹಿಸಿದ್ದರು. ಜನಾಂದೋಲನ ಮಹಾಮೈತ್ರಿಯ ಜಿಲ್ಲಾ ಅಧ್ಯಕ್ಷ ಬಿ.ಬಸವರಾಜ, ಮುನಿಸ್ವಾಮಿ, ತಿಪಾರೆಡ್ಡಿ ಪಾಟೀಲ್, ಗಿರಿಯಪ ದಿನ್ರಿ, ಹನುಮಂತ ಆರೋಲಿ, ಡಾ.ಹುಲಿನಾಯಕ, ಮಲ್ಲಿಕಾರ್ಜುನ ಹೀರೆಮಠ, ಬಷೀರ ಅಹ್ಮದ ಹೊಸಮನಿ ಸೇರಿ ಅನೇಕರಿದ್ದರು.
