ಮಕ್ಕಳಿಗೆ ಶಿಕ್ಷಣವನ್ನು ಕಲಿಸುವುದರ ಜೊತೆಯಲ್ಲಿ ಸಂಸ್ಕಾರವನ್ನು ಕಲಿಸುವ ಹಾಗೂ ಸರಳತೆಯಿಂದ ಕಾರ್ಯ ನಿರ್ವಹಿಸುವ ಶಿಕ್ಷಕನು ಉತ್ತಮ ಶಿಕ್ಷಕವೆನೆಸಿಕೊಳ್ಳುತ್ತಾನೆ ಎಂದು ರಾಯಚೂರು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಅದ್ಯಕ್ಷರು ಹಾಗೂ ಸಹ ಶಿಕ್ಷಕರಾದ ತಾಯರಾಜ್ ಮರ್ಚಟ್ಹಾಳ್ ಹೇಳಿದರು .
ಅವರು ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ಯಾದೊಡ್ಡಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಖಾಜಾ ಹುಸೇನ ಅವರ ವಯೋನಿವೃತ್ತಿ ನಿಮಿತ್ಯ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು.
ಶಿಕ್ಷಕರಿಗೆ ಸಹನೆ ,ಸರಳತೆ ಮತ್ತು ತಾಳ್ಮೆ ಮುಖ್ಯವಾಗಿವೆ.ಮಕ್ಕಳಿಗೆ ಕಲಿಕಾಂಶಗಳ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕು ಎಂದರು.
ತಾಲ್ಲೂಕಿನ ವಿವಿಧ ಭಾಗಗಳ ಶಾಲೆಯ ಶಿಕ್ಷಕರು ಇಡಪನೂರು ವಲಯದ ಸಿಆರ್ ಪಿ ಭೀಮ ನಾಯಕ್ ,ರಾಯಚೂರು ಬಸವನಗರ ಶಾಲೆಯ ಮುಖ್ಯ ಗುರುಗಳು ವೆಂಕಟೇಶ ಹಾಗೂ ಹೊಸ ಗೋನವಾರ ಶಾಲೆಯ ಸಹ ಶಿಕ್ಷಕ ಸುರೇಶ್ ಭಾಗವಹಿಸಿ ನಿವೃತ್ತಿ ಶಿಕ್ಷಕನ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ವಚ್ಚತಾ ಅಭಿಯಾನಕ್ಕೆ, ಸಾರ್ವಜನಿಕರ ಅಗತ್ಯದಿಂದ ನಗರ ಸ್ವಚ್ಛವಾಗಿರುತ್ತದೆ ; ಜಯಣ್ಣ
ವೇದಿಕೆಯ ಮೇಲೆ ನಿವೃತ್ತಿ ಶಿಕ್ಷಕ ಖಾಜಾ ಹುಸೇನ,ಎಸ್ ಡಿ ಎಂ ಸಿ ಅಧ್ಯಕ್ಷ ಭೀಮಣ್ಣ , ಉಡುಮಗಲ್ ಶಾಲೆಯ ಸಹ ಶಿಕ್ಷಕಿ ಶೀಲಾದೇವಿ, ಮೋಹಿನುದ್ದೀನ್, ಮಹೇಬೂಬ ಪಾಷಾ,ಅಬ್ಬಾಸ್ ಹುಸೇನ್,ಯರಗೇರ ಈಶ್ವರ ಗುಡಿ ಶಾಲೆಯ ಸಹ ಶಿಕ್ಷಕರಾದ ತಿಮ್ಮಪ್ಪ,ಲಿಂಗನ ಖಾನ್ ದೊಡ್ಡಿ ಗ್ರಾಮ ಲೆಕ್ಕಾಧಿಕಾರಿ ಗುರುನಾಥ್, ಶಿಕ್ಷಣ ಪ್ರೇಮಿ ಲಕ್ಷ್ಮಣ,ವೆಂಕಟೇಶ್,ಮುದ್ದುಕೃಷ್ಣ,ಶಿಕ್ಷಕ ಶಹಾಬುದ್ದೀನ್,ಕೊತ್ತದೊಡ್ಡಿ ಶಾಲೆಯ ಶಿಕ್ಷಕ ಚಂದ್ರಶೇಖರ್,ಭೀರಪ್ಪ, ಮಾಲದೊಡ್ಡಿ ಶಾಲೆಯ ಸಹ ಶಿಕ್ಷಕ ವಿರುಪಾಕ್ಷಿ,ಜಂಬಲ ದಿನ್ನಿ ಶಾಲೆಯ ಸಹ ಶಿಕ್ಷಕಿ ದಾನಕ್ಕ,ಮಿಡಗಲದಿನ್ನಿ ಶಾಲೆಯ ಸಹ ಶಿಕ್ಷಕ ಹಸನ್ ಅಂಗನವಾಡಿ ಕಾರ್ಯಕರ್ತೆ ಮಂಜಮ್ಮ,ಬಿಸಿಯೂಟ ಮುಖ್ಯ ಅಡುಗೆಯವರಾದ ಲಕ್ಷ್ಮೀ,ಆಯಾ ಬಡೆಮ್ಮ,ತಿಮಲಮ್ಮ,ಹಾಗು ಗ್ರಾಮದ ಮುಖಂಡರು, ಶಾಲಾ ಎಸ್ಡಿಎಂಸಿ ಸದಸ್ಯರು ವಿದ್ಯಾರ್ಥಿಗಳು,ಮತ್ತು ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.