ಕುರಿ ಅಡ್ಡಬಂದ ಕಾರಣಕ್ಕೆ ಬಸ್ ಕಂದಕಕ್ಕೆ ಉರುಳಿದ್ದು, ಭಾರೀ ಅನಾಹುತವಾಗುವ ಸಂಭವ ತಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುರುಗುಂಟ ಹೋಬಳಿಯ ಪೈದೊಡ್ಡಿ ಕ್ರಾಸ್ ಬಳಿ ನಡೆದಿದೆ.
ಕಲಬುರಗಿ ಜಿಲ್ಲೆಗೆ ಬಸ್ ತೆರಳುತ್ತಿದ್ದ ಬಸ್ಸಿಗೆ ಪೈದೊಡ್ಡಿ ಕ್ರಾಸ್ ಬಳಿ ಕುರಿ ಅಡ್ಡ ಬಂದಿದೆ. ಕುರಿಯ ಜೀವ ಉಳಿಸಲೆಂದು ಬಸ್ ಚಾಲಕ ಜೋರಾಗಿ ಬ್ರೇಕ್ ಹಾಕಿದ್ದಾರೆ. ಬ್ರೇಕ್ ಹಾಕಿದ ಪರಿಣಾಮ ಬಸ್ ಕಂದಕ್ಕೆ ಉರುಳಿ ರಸ್ತೆಗೆ ಅಡ್ಡವಾಗಿ ನಿಂತಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದೇಶದ ಅಪ್ರತಿಮ ಅರ್ಥಶಾಸ್ತ್ರಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ
ಬೀದರ್ ಟು ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಆಗಿರುವುದರಿಂದ ಸುಮಾರು ಹೊತ್ತಿನ ತನಕ ಸಂಚಾರ ದಟ್ಟಣೆಯಾಗಿತ್ತು. ಬಳಿಕ ಪೊಲೀಸರು ಕೂಡಲೇ ಧಾವಿಸಿದ್ದು, ಕ್ರೇನ್ ಮೂಲ ಬಸ್ ತೆಗೆಸಿದ್ದು, ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಜರುಗಿಲ್ಲ ಎಂದು ತಿಳಿದುಬಂದಿದೆ.
