ಶಿಕ್ಷಕ ವೃತ್ತಿ ಪವಿತ್ರ ಅವರು ಗೌರವಯುತವಾದ ಹುದ್ದೆಯಾಗಿದ್ದು ಶಿಕ್ಷಕರು ಮಾದರಿಯಾಗಿ ಕಾರ್ಯನಿರ್ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಹೇಳಿದರು.
ಹಾಷ್ಮೀಯಾ ಶಾಲೆಯಲ್ಲಿ (ಜ.6) ಆಯೋಜಿಸಲಾಗಿದ್ದ ನೂತನ ಜಿಪಿಟಿ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ, ನೂತನ ಶಿಕ್ಷಕರಿಗೆ ಸೇವಾ ಪುಸ್ತಕ ವಿತರಣೆ, ನೂತನ ವರ್ಷ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಜೀವನ ರೂಪಿಸುವುದು ಶಿಕ್ಷಕರ ಮೇಲಿದೆ. ಸಮಾಜದ ಬದಲಾವಣೆಗೆ ಶಿಕ್ಷಕರೇ ಸ್ಪೂರ್ತಿಯಾಗಬೇಕು. ಶಿಕ್ಷಕನಾಗಿ ವೃತ್ತಿ ನಡೆಸಿ ನಂತರ ಅಪರ ಜಿಲ್ಲಾಧಿಕಾರಿವರೆಗೆ ಕಾರ್ಯನಿರ್ವಹಿಸಿರುವ ಅನುಭವ ಹಂಚಿಕೊಂಡರು.
ಮುಖ್ಯ ಅತಿಥಿಯಾಗಿ ಮಾತನಾಡಿ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಸಿ ಶಶಿಕಾಂತ ಶಿವಪುರೆ, ಶಿಕ್ಷಕರ ಪ್ರಾಮಾಣಿಕ ಸೇವೆ ಶೈಕ್ಷಣಿಕ, ಸಮಾಜಿಕ ಬದಲಾವಣೆ ಕಾರಣವಾಗಲಿದೆ. ಶಿಕ್ಷಕರಾಗಿ ಸೇವೆ ಪ್ರಾರಂಭಿಸಿರುವರು ಜಿಲ್ಲೆಯ ಶೈಕ್ಷಣಿಕ ಬದಲಾವಣೆಗೆ ಶ್ರಮಿಸಬೇಕು. ಜಿಲ್ಲೆಗೆ ಹೊಸದಾಗಿ 750 ಜನ ಶಿಕ್ಷಕರು ನೇಮಕವಾಗಿ ಬಂದಿರುವದು ಜಿಲ್ಲೆಯ ಸೌಭಾಗ್ಯ. ಶೈಕ್ಷಣಿಕ ಅಭಿವೃದ್ಧಿ ಹೊಸ ಶಿಕ್ಷಕರು ತೊಡಗಿಸಿಕೊಳ್ಳಬೇಕೆಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಡಿ. ಬಡಿಗೇರ ಮಾತನಾಡಿ, ಶಿಕ್ಷಕರು ಕರ್ತವ್ಯ ಮತ್ತು ಜವಬ್ದಾರಿ ಅರಿತು ಕಾರ್ಯನಿರ್ವಹಿಸಬೇಕಿದೆ. ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸುವ ಜೊತೆಗೆ ಕಲಿಕಾ ಆಸಕ್ತಿ ಮೂಡಿಸುವ ಮುಖ್ಯವಾಗಬೇಕಿದೆ ಎಂದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ರೆಡ್ಡಿ, ನಿವೃತ್ತ ಅಧಿಕಾರಿ ಹನುಮಂತಪ್ಪಗವಾಯಿ, ನಂದೀಶ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲೇಶ ವಹಿಸಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ರಾಜಶೇಖರ ನಿರೂಪಿಸಿದರು. ರಾಘವೇಂದ್ರ ಗಬ್ಬೂರು ಸ್ವಾಗತಿಸಿದರೆ, ಭೀಮೇಶ ನಾಯಕ ವಂದಿಸಿದರು.