ರಕ್ತಸಂಬಂಧಿಗಳಾಗಿದ್ದ ಮೂರು ಯುವತಿಯರು ಭಾನುವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೇವದುರ್ಗ ತಾಲೂಕಿನ ಕೆ. ಇರಬಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕ್ವಾರಿಯರದೊಡ್ಡಿಯಲ್ಲಿ ನಡೆದಿದೆ.
ಈ ಘಟನೆಯಲ್ಲಿ ರೇಣುಕಮ್ಮ ಮಜ್ಜಿಗೆ (18) ಮೃತಪಟ್ಟಿದ್ದಾರೆ. ಸುನೀತಾ ಮಜ್ಜಿಗೆ ಹಾಗೂ ಮುದುಕಮ್ಮ ಮಜ್ಜಿಗೆ ಎಂಬ ಇನ್ನಿಬ್ಬರು ಯುವತಿಯರ ಸ್ಥಿತಿ ಗಂಭೀರವಾಗಿದ್ದು, ಮೊದಲಿಗೆ ಅವರನ್ನು ದೇವದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಕ್ತಸ್ರಾವ : ಬಾಣಂತಿ ಸಾವು
ಆತ್ಮಹತ್ಯೆಗೆ ಯತ್ನಿಸಿದ ಮೂವರು ಯುವತಿಯರು ಪರಸ್ಪರ ರಕ್ತಸಂಬಂಧಿಗಳಾಗಿದ್ದಾರೆ. ಘಟನೆಯ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ದೇವದುರ್ಗ ಪೊಲೀಸ್ ಠಾಣೆಯ ಪಿಐ ಮಂಜುನಾಥ ಎಸ್ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ.
