ರಾಯಚೂರಿನ ಮಂತ್ರಾಲಯದ ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಹಾಸನ ಮೂಲದ ಮೂವರು ಯುವಕರು ನಾಪತ್ತೆ ಘಟನೆ ಶನಿವಾರ ನಡೆದಿದೆ.
ಹಾಸನ ಜಿಲ್ಲೆಯ ಅರಸಿಕೇರೆ ತಾಲ್ಲೂಕಿನ ಅಜಿತ್ (20), ಸಚಿನ್(20) ಹಾಗೂ ಪ್ರಮೋದ (19) ನಾಪತ್ತೆಯಾದ ಯುವಕರು ಎಂದು ಹೇಳಲಾಗುತ್ತಿದೆ.
ಮೂವರು ಯುವಕರು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬಂದಿದ್ದರು. ಈ ವೇಳೆ ತುಂಗಭದ್ರಾ ನದಿಯಲ್ಲಿ ಈಜಲು ಹೋದಾಗ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ : ಬೀದರ್ | ಕಾಡು ಹಂದಿ, ಜಿಂಕೆಗಳ ಕಾಟ : ಬೆಳೆ ರಕ್ಷಣೆಗೆ ಸೀರೆ, ಸೋಲಾರ್ ಮೊರೆ ಹೋದ ರೈತರು!
ಈ ಬಗ್ಗೆ ಮಂತ್ರಾಲಯ ಠಾಣೆಯ ಪೊಲೀಸರು ಹಾಗೂ ಈಜುಗಾರರು ತಂಡವು ಶೋಧ ಕಾರ್ಯಾಚರಣೆ ಮುಂದುವರೆದಿದೆ. ಮಂತ್ರಾಲಯ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.