ರಾಯಚೂರು ನಗರದಿಂದ ಹೈದರಾಬಾದ್ ಕಡೆಗೆ ಭತ್ತದ ಹೊಟ್ಟು ತುಂಬಿಕೊಂಡು ಹೊರಟಿದ್ದ ಲಾರಿ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಶೆಡ್‌ಗೆ ನುಗ್ಗಿದ ಘಟನೆ ನಡೆದಿದೆ.
ಭತ್ತದ ಹೊಟ್ಟು ಸಾಗಾಣೆ ಮಾಡುತ್ತಿದ್ದ ಲಾರಿ ರಸ್ತೆ ಬದಿಯ ಹೋಟೆಲ್‌ಗೆ ನುಗ್ಗಿದ್ದು, ಶೆಡ್‌ಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಾಣಂತಿಯರ ಸಾವಿನ ಪ್ರಕರಣ ತಡೆಯುವಲ್ಲಿ ಸಚಿವ ದಿನೇಶ್, ಶರಣಪ್ರಕಾಶ್ ವಿಫಲ; ರಾಜೀನಾಮೆಗೆ ಕೆಆರ್‌ಎಸ್ ಆಗ್ರಹ
ಘಟನೆಯಿಂದ ಫಾಸ್ಟ್‌ಫುಡ್ ಸೆಂಟರ್ ಹಾಗೂ ಹೋಟೆಲ್‌ಗೆ ನುಗ್ಗಿದ ಪರಿಣಾಮ ಹೋಟೆಲ್ ತುಂಬಾ ಹೊಟ್ಟು ತುಂಬಿಕೊಂಡಿದ್ದು, ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಜಖಂ ಆಗಿವೆ.
ಓವರ್ ಲೋಡ್ ತುಂಬಿಕೊಂಡು ಹೋಗುತ್ತಿದ್ದರಿಂದ ಲಾರಿ ಪಲ್ಟಿಯಾಗಿದೆಯೆಂದು ಹೇಳಲಾಗುತ್ತಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
