ರಾಯಚೂರು | ಅಭಿವೃದ್ದಿ ಹೆಸರಿನಲ್ಲಿ ಮರಗಳ ಮಾರಣಹೋಮ ಸಂರಕ್ಷಣೆಗೆ ; ಕೆ ಆರ್ ಎಸ್ ಒತ್ತಾಯ

Date:

Advertisements

ಲಿಂಗಸುಗೂರು ತಾಲೂಕಿನಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು ಮರಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಕತ್ತಿರಿಸಬಾರದು, ಪರಿಸರ ಸಂರಕ್ಷಣೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾಗೂ ಮೈ ಸಿಟಿ (NGO) ವತಿಯಿಂದ ಲಿಂಗಸುಗೂರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಹಾಗೂ ಲಿಂಗಸುಗೂರು ತಾಲೂಕಿನಲ್ಲಿ ಪ್ರತಿ ವರ್ಷವೂ ಬೇಸಿಗೆಕಾಲದಲ್ಲಿ ತಾಪಮಾನ ಅತಿ ಹೆಚ್ಚುತ ಬರುತ್ತಿದೆ. ಮಳೆಗಾಲದಲ್ಲಿ ಸುತ್ತಮುತ್ತ ಮಳೆ ಬಂದರೂ ನಮ್ಮ ಲಿಂಗಸುಗೂರು ತಾಲೂಕಿನಲಿ ಮಳೆ ಬಾರದೆ ಬರಗಾಲದ ಹಾಗೆ ಇರುತ್ತದೆ. ಇದಕ್ಕೆ ಮರ-ಗಿಡಗಳ ಕೊರತರಯೇ ಕಾರಣ. ಇರುವ ನೂರಾರು ವರ್ಷ ಹಳೆಯ ಗಿಡಗಳನ್ನು ಅಭಿವೃದ್ಧಿ ಹೆಸರಲ್ಲಿ ಕತ್ತರಿಸುತ್ತಿದ್ದಾರೆ ಎಂದು ದೂರಿದರು.

ಲಿಂಗಸುಗೂರು ತಾಲೂಕಿನಲ್ಲಿ ಅತಿ ಹೆಚ್ಚು ಗುಡ್ಡಗಳು ಹಾಗೂ ಸರ್ಕಾರಿ ಜಾಗ ಇದೆ ಆದರೂ ಇಲ್ಲಿ ಯಾವುದೇ ಅಧಿಕಾರಿಗಳಿಂದ ಮತ್ತು ಜನಪ್ರತಿನಿಧಿಗಳಿಂದ ಪರಿಸರ ಸಂರಕ್ಷಣೆ ಮಾಡುವ ಕಾರ್ಯ ನಡೆದಿಲ್ಲ. ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳನ್ನು ರೂಪಿಸಬೇಕು ಹಾಗೂ ಸಂಘಟನೆಯ ವಿವಿಧ ಬೇಡಿಕೆಗಳನ್ನು ಈಡೆರಿಸಬೇಕು ಎಂದು ಆಗ್ರಹಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ರಾಯಚೂರು | ವಕ್ಫ್ ಮಸೂದೆ ಅಂಗೀಕಾರದ ವಿರುದ್ಧ ಅಭಿಯಾನ; ವೆಲ್ಫೇರ್ ಪಾರ್ಟಿ ಕರೆ

ರೈತರು ಹೊಲಗಳಲ್ಲಿ ವಿಷಕಾರಿ ಕೀಟನಾಶಕ ಮತ್ತು ವಿಷಕಾರಿ ಗೊಬ್ಬರಗಳನ್ನು ಬಳಸುತ್ತಿದ್ದು ಇದರಿಂದ ಭೂಮಿಯ ಫಲತಾಂಷ ಕಡಿಮೆ ಆಗುತ್ತಿದೆ ಹಾಗೂ ಜೀವರಾಶಿ ಗಳಿಗೆ ವಿಷಕಾರಿ ಆಹಾರ ಆಗುತ್ತಿದೆ, ಇದನ್ನು ಸರ್ಕಾರವು ವಿಷಕಾರಿ ಗೊಬ್ಬರ ಹಾಗೂ ಕೆಮಿಕಲ್ ಗಳನ್ನು ನಿಷೇಧಿಸಬೇಕು.
ಸರ್ಕಾರ ಸಾವಯವ ಕೃಷಿ ಹಾಗೂ ಎರೇ ಹುಳ ಗೊಬ್ಬರ ಹಾಕುವವರಿಗೆ ಪ್ರೋತ್ಸಾಹಿಸಬೇಕು, ಬೆಳೆ ಸಾಲ ಮತ್ತು ಬೆಳೆ ವಿಮೆಯನ್ನು ಇವರಿಗೆ ಮಾತ್ರ ಒದಗಿಸಬೇಕು.

ಪ್ರತಿಯೊಂದು ಹೊಲಗಳ ಬದುವಲ್ಲಿ 10 ರಿಂದ 15 ಗಿಡಗಳನ್ನು ನಡೆಸುವಂತೆ ಸರ್ಕಾರವು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಬೇಕು. ಗ್ರಾಮದ ಸರ್ಕಾರ ಜಾಗಗಳಲ್ಲಿ ಅರಣ್ಯ ಅಧಿಕಾರಿಗಳಿಂದ ಗ್ರಾಮಗಳಲ್ಲಿ ಚಿಕ್ಕ ಅರಣ್ಯ ಸೃಷ್ಟಿಸಬೇಕು. ನಗರ ಪ್ರದೇಶ NA ಲೇಔಟ್, ಸರ್ಕಾರದ ಉದ್ಯಾನವನಗಳಲ್ಲಿ ಅತಿ ಹೆಚ್ಚು ಗಿಡ ಮರಗಳನ್ನು ಹಾಕಬೇಕು. ಯಾರಾದರೂ ಗಿಡಗಳನ್ನು ಹಚ್ಚುವುದಿಲ್ಲವೋ ಅವರಿಗೆ ದುಪ್ಪಟ್ಟು ತೆರಿಗೆಯನ್ನು ವಿಧಿಸುವ ಹಾಗೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಬೇಕು. ತಾಲೂಕಿನ ನಾಲ್ಕು ದಿಕ್ಕುಗಳಲ್ಲಿ ಹಚ್ಚಹಸಿರಾದ ಕಾಡನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡ ವಿಜಯ್ ಪೋಳ, ದ್ಯಾವಣ್ಣ ಅಪ್ಪುಲದಿನ್ನಿ, ಬಸವಪ್ರಭುಮೇಧಾ, ಗಂಗಾ ಕೆ ನಾಯಕ್, ನಿರುಪಾದಿ ಕೆ ಗೋಮರ್ಸಿ, ಕೃಷ್ಣ ಸುಕಲ್ಪೇಟೆ, ರಾಮಸ್ವಾಮಿಅರೋಲಿ, ಶರಣಬಸವ ಕವಿತಾಳ, ಅಲ್ಲಾ ಸಾಬ್, ಗಂಗಪ್ಪ ಕಬ್ಬೇರ್, ಅಮರೇಶ್ ಗುಂಡಸಾಗರ್ ಉಪಸ್ಥಿತರಿದ್ದರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X