ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ರಾಯಚೂರು ನಗರದ ಪವರ್‌ಗ್ರಿಡ್ ಬಳಿ ನಡೆದಿದೆ.
ಶರಣ ಬಸವ ಹಾಗೂ ಶಿವು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗರೀಬ್ ಹಾಗೂ ಇರ್ಫಾನ್ ಗಂಭೀರ ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ.
ಸಿರವಾರ ತಾಲೂಕಿನ ಕಲ್ಲೂರ ಗ್ರಾಮದ ಯುವಕರು ಎನ್ನಲಾಗಿದೆ. ಸಿರವಾರ ತಾಲೂಕಿನ ಕಲ್ಲೂರ ಗ್ರಾಮದಿಂದ ರಾಯಚೂರು ನಗರಕ್ಕೆ ಸೆಂಟ್ರಿಂಗ್ ಕೆಲಸದ ನಿಮಿತ್ಯ ತೆರಳಿದ್ದರು. ಮನೆಗೆ ವಾಪಸಾಗುವಾಗ ಪವರ್ ಗ್ರಿಡ್ ಬಳಿ ಕಾರು ಹಾಗೂ ಬೈಕ್ ಮದ್ಯೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕಾರು ಚಾಲಕ ಪರಾರಿಯಾಗಿದ್ದಾನೆ.
ಇದನ್ನು ಓದಿದ್ದೀರಾ? ಸೌಹಾರ್ದ ನಿಲಯ : ಅನಾರೋಗ್ಯ ಪೀಡಿತರಾಗಿದ್ದ ‘ಸುಶೀಲಾ’ಗೆ ಮನೆ ನಿರ್ಮಿಸಿದ ‘ಆಯಿಷಾ’
ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.
