ವಕ್ಫ್ ಕಾಯ್ದೆ ಜಾರಿಗೆ ತಂದು ನಮ್ಮ ಸಂಪತ್ತನ್ನು ಲೂಟಿ ಹೊಡೆಯುವ ಹುನ್ನಾರ ಬಿಜೆಪಿ ಪಕ್ಷದಾಗಿದೆ.ವಕ್ಫ್ ಮಂಡಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮೇತರರು ಇದ್ದರೆ ನಮಗೆ ನ್ಯಾಯ ಹೇಗೆ ಸಿಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಜಾಕ್ ಉಸ್ತಾದ ಹೇಳಿದರು.
ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಸ್ಲಿಂ ಸಮುದಾಯವು ಸುಮಾರು 200 ವರ್ಷಗಳಿಗಿಂತ ಹಳೆಯ ವಕ್ಫ್ ಆಸ್ತಿಯನ್ನು ಸಂರಕ್ಷಿಸಿ ಬಳಸಿಕೊಳ್ಳುತ್ತಿದ್ದು ನೂತನ ಕಾಯ್ದೆ ಮೂಲಕ ವಕ್ಫ್ ಆಸ್ತಿಯ ದಾಖಲೆ ತೋರಿಸಬೇಕು, ಇಲ್ಲದಿದ್ದರೆ ಸರ್ಕಾರ ತನ್ನ ವಶಕ್ಕೆ ಪಡೆಯುತ್ತದೆ. ಇದು ವ್ಯವಸ್ಥಿತವಾಗಿ ಮುಸ್ಲಿಮರ ಭೂಮಿ ಕಸಿದುಕೊಳ್ಳುವ ಹುನ್ನಾರವಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿಡಿಲು ಬಡಿದು ಮೃತಪಟ್ಟ ಕುಟುಂಬಕ್ಕೆ 5 ಲಕ್ಷ್ಯ ಪರಿಹಾರ
ನಾವು ವಕ್ಫ್ ಯಾರ ಅಸ್ತಿಯು ವಶ ಮಾಡುವುದಿಲ್ಲ.ವಕ್ಪ್ ಆಸ್ತಿಯೇ ಬೇರೆಯವರು ಕಬ್ಜ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಇದೆ. ಒಂದು ಬಾರಿ ವಕ್ಫ್ ಕೊನೆಯ ವರೆಗೂ ವಕ್ಫ್ ಅಂತ ಹೀಗಾಗಿ ನಮ್ಮ ಭೂಮಿಗಾಗಿ ನಾವು ಹೋರಾಡುತ್ತೇವೆ. ನ್ಯಾಯಾಲಯದಲ್ಲಿ ಸೋತರೂ ಬೀದಿಗಿಳಿದು ಹೋರಾಟ ಮಾಡುತ್ತೇವೆ.ಒಂದು ಇಂಚು ಕೂಡ ಹಿಂದೆ ಸರಿಯುವ ಮಾತಿಲ್ಲ ಎಂದು ಒತ್ತಾಯಿಸಿದರು.
ನಂತರ ಮಾತನಾಡಿದ ವಕೀಲ ಶಿವಕುಮಾರ ಮ್ಯಾಗಳಮನಿ ವಕ್ಫ್ ಹೋರಾಟವು ಈ ನಾಡಿನ ಎಲ್ಲಾ ಸಾರ್ವಜನಿಕರ ಹೋರಾಟವಾಗಿದೆ. ಬರೀ ಮುಸ್ಲಿಮರ ಹೋರಾಟವೆಂದು ಕಾಣಿಸುತ್ತಿದೆ.ನಿರಂತರ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಿ ಎಲ್ಲಾ ಹಿತದೃಷ್ಟಿಯಿಂದ ಬಗ್ಗು ಬಡಿಸಿ ವಕ್ಫ್ ಸಂಪತ್ತನ್ನು ಬಂಡವಾಳ ಶಾಹಿಗಳಿಗೆ ಕೈ ವಶ ಮಾಡಬೇಕು ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮೊಹಮ್ಮದ ಶಾಲಂ, ಮೌಲಾನಾ ಮೊಹಮ್ಮದ ಫರೀದಖಾನ, ಸಾಜೀದ ಸಮೀರ, ಅಬ್ದುಲ್ ಕರೀಂ, ಮೌಲಾನಾ ರಫೀಕ ಸಾಹಾಬ, ಸೈಯದ್ ಅಶ್ರಫ ರಜಾ, ಸೈಯದ್ ಮೋಸೀನ್, ಸೈಯದ್ ಮಾಸೂಮ್, ಅಕ್ಬರ್ ನಾಗುಂಡಿ, ಫೈಜಲ್ ಖಾನ್ ಮತ್ತಿತರರು ಇದ್ದರು.