ಕಳೆದ ಎರಡು ವರ್ಷಗಳಿಂದ ಏಮ್ಸ್ ಮಂಜೂರಾತಿಗೆ ಸತತ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಳ್ಳು ಭರವಸೆಗಳನ್ನು ನೀಡುತ್ತಲೇ ಬಂದಿವೆ. ಏಮ್ಸ್ ಕುರಿತು ಖಚಿತ ಭರವಸೆ ನೀಡದೇ ಹೋದರೆ ಲೋಕಸಭಾ ಚುನಾವಣೆ ಬಹಿಷ್ಕರಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕಾಗುತ್ತದೆ ಎಂದು ರಾಯಚೂರು ಜನ ಜಾಗೃತಿ ಸಂಘದ ಅಧ್ಯಕ್ಷ ಕೆ.ಈರೇಶ ಹೇಳಿದರು.
ಕಲಬುರಗಿಯಲ್ಲಿ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಹಿಂದುಳಿದಿದೆ ಎಂದು ಹೇಳುವ ರಾಜಕೀಯ ಪಕ್ಷಗಳ ನಾಯಕರು ಈ ಭಾಗಕ್ಕೆ ಆಗುತ್ತಿರುವ ಅನ್ಯಾಯ ವಿರುದ್ದ ಕಿಚಿತ್ತು ಧ್ವನಿಯೆತ್ತುತ್ತಿಲ್ಲ. ತಮ್ಮ ಪಕ್ಷದ ಮುಖಂಡರ ಮೇಲೆ ಒತ್ತಡವೂ ಹಾಕದೇ ಸುಳ್ಳು ಭರವಸೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಚುನಾವಣೆ ಪ್ರಚಾರಕ್ಕೆ ಬರುವ ವಿವಿಧ ಅಭ್ಯರ್ಥಿಗಳನ್ನು ಜನರು ಪ್ರಶ್ನಿಸಬೇಕು ಎಂದರು.
ಏಮ್ಸ್ ಮಂಜೂರು ಮಾಡದಿದ್ದರೆ ಓಟು ಹಾಕುವುದಿಲ್ಲ ಎಂದು ಎಚ್ಚರಿಸಬೇಕು ಎಂದರು. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಬಡತನದೊಂದಿಗೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸೂಕ್ತ ಚಿಕಿತ್ಸಾ ವ್ಯವಸ್ಥೆಯಿಲ್ಲದೇ ಬೆಂಗಳೂರು, ಹೈದ್ರಾಬಾದಗೆ ಹೋಗುವ ಸ್ಥಿತಿಯಿದೆ. ಬಡ ಜನರು ದೊಡ್ಡ ಊರುಗಳಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಏಮ್ಸ್ ಹೋರಾಟ ಮಾಡುತ್ತಿರುವರ ವೈಯಕ್ತಿಕವಾಗಿ ಏನು ಕೇಳುತ್ತಿಲ್ಲ. ಈಭಾಗಕ್ಕೆ ಬೇಕಿರುವ ಏಮ್ಸ್ ಮಂಜೂರು ಮಾಡಲು ಹೋರಾಟ ಮಾಡುತ್ತಿದ್ದಾರೆ. ಆದರೆ, ರಾಜಕೀಯ ನಾಯಕರುಗಳು ಕೇವಲ ಭರವಸೆ ನೀಡಿ ಈಡೇರಿಸುತ್ತಿಲ್ಲ. ಜನರು ಪ್ರಶ್ನಿಸುವ ಮೂಲಕ ಸುಳ್ಳು ಆಶ್ವಾಸನೆ ನಿಡುವವರಿಗೆ ಬುದ್ದಿ ಕಲಿಸಬೇಕೆಂದರು.
ಈ ಸಂದರ್ಭದಲ್ಲಿ ಇಮಾಮ್ ಪಾಷಾ, ಸೈಯದ್ ನವಾನ, ಹುಸೇನ ಪಾಷಾ, ಇಬ್ರಾಹಿಂ, ಧರ್ಮರಾಜ ಉಪಸ್ಥಿತರಿದ್ದರು.