ತುಂಗಭದ್ರಾ ಮತ್ತು ನಾರಾಯಣಪುರು ಬಲದಂಡೆ ಕಾಲುವೆ ಸಮಸ್ಯೆಗಳ ಯಾವುದೇ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 4ರಂದು ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ಎಚ್ಚರಿಕೆ ನೀಡಿದ್ದಾರೆ.
ರಾಯಚೂರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುಉದ್ದೇಶಿಸಿ ಮಾತನಾಡಿದ ಅವರು, ತುಂಗಭದ್ರ ಎಡದಂಡೆ ಕಾಲುವೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವೇ ದೊರೆಯದೇ ಹೋಗಿದೆ. ಅನೇಕ ಪ್ರತಿಭಟನೆಗಳು, ಮನವಿ ನೀಡಿದರೂ ಆಡಳಿತದಿಂದ ಸ್ಪಂದನೆ ದೊರೆಯುತ್ತಿಲ್ಲ ಎಂದು ಕಿಡಿಕಾರಿದರು.
ತುಂಗಭದ್ರಾ ಮತ್ತು ನಾರಾಯಣಪುರು ಬಲದಂಡೆ ಕಾಲುವೆ ನೀರು ಎಡದಂಡೆ ಕೊನೆಭಾಗಕ್ಕೆ ನೀರು ತಲುಪದೇ ಇರುವದರಿಂದ ಉಸ್ತುವಾರಿ ಸಚಿವರಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು. ತುಂಗಭದ್ರ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತ ಸಂಘದ ಮುಖಂಡ ಚಾಮರಸಮಾಲಿ ಪಾಟೀಲ್ ನೇತೃತ್ವದ ನಿಯೋಗ ಮನವಿ ಮಾಡಿದಾಗ ಸಿಎಂ ಸಚಿವರಿಗೆ ಸಭೆ ನಡೆಸಲು ಸೂಚಿಸಿದರು. ಎರಡು ತಿಂಗಳಾದರೂ ಕೊನೆಭಾಗಕ್ಕೆ ನೀರು ತಲುಪಿಲ್ಲ. ಸಭೆಯನ್ನು ಸಚಿವರು ನಡೆಸಿಲ್ಲ.ಕಾಲುವೆಯಲ್ಲಿ ನೀರು ನಿರ್ವಹಣೆ ಸಂಪೂರ್ಣ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಎಡದಂಡೆ ಕಾಲುವೆ 82, 85 89, 76, 91, 92 ಕಾಲುವೆ ನೀರೇ ತಲುಪಿಲ್ಲ. ಭತ್ತ ಬೆಳೆ ಒಣಗಿ ಹೋಗಿ ಬೆಳೆ ನಷ್ಟಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿಗಳು ಸೂಚಿಸಿದರೂ ಕೂಡ ನೀರು ಬಾರದೇ ಹೋಗಿದೆ ಎಂದು ಪ್ರಭಾಕರ ಪಾಟೀಲ್ ತಿಳಿಸಿದರು.
ಇದನ್ನು ಓದಿದ್ದೀರಾ? ಕೋಲಾರ | ಪರಸ್ಪರ ಹೃದಯಗಳನ್ನು ಬೆಸೆದ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮ
ನಾರಾಯಣಪುರ ಬಲದಂಡೆ ಕಾಲುವೆ ಅಧುನೀಕರಣ ಹೆಸರಿನಲ್ಲಿ ಕಾಮಗಾರಿಯನ್ನು ಅರೆಬರೆ ಮಾಡಿ ಗುತ್ತಿಗೆದಾರರು, ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಮುಖ್ಯಮಂತ್ರಿಗಳು ಚುನಾವಣಾ ವೇಳೆಯಲ್ಲಿ ಭಾಷಣ ಮಾಡಿ ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಗುತ್ತಿಗೆದಾರರನ್ನು ಜೈಲಿಗೆ ಕಳುಹಿಸುವದಾಗಿ ವೀರಾವೇಷವಾಗಿ ಮಾತನಾಡಿದ್ದರು. ಅಧಿಕಾರ ಹಿಡಿದು ಎರಡು ವರ್ಷ ಕಳೆಯುತ್ತಿದ್ದರೂ ಯಾರ ವಿರುದ್ದ ಕ್ರಮವೇ ಆಗಿಲ್ಲ. ಸರ್ಕಾರ ಮಲತಾಯಿ ಧೋರಣೆ ಖಂಡಿಸಿ ಸಿಎಂರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಬೂದೆಯ್ಯ ಸ್ವಾಮಿ, ಹಾಜಿ ಮಸ್ತಾನ್, ಭೀಮಣ್ಣನಾಯಕ ಇದ್ದರು.
