ಕುಡಿಯುವ ನೀರು ಪೂರೈಸಲು ಆಗ್ರಹಿಸಿ ಲಿಂಗಸೂಗೂರು ತಾಲ್ಲೂಕಿನ ಈಚನಾಳ ಗ್ರಾಮ ಪಂಚಾಯತಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಗ್ರಾಮಸ್ಥರು ಬುದುವಾರ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟಿಸಿದರು.
ಗ್ರಾಮದ ವಾರ್ಡ್ -1 ಹಾಗೂ ವಾರ್ಡ್ 2 ರಲ್ಲಿ ಸುಮಾರು ಒಂದು ತಿಂಗಳಿಂದ ಕುಡಿಯುವ ನೀರು ಪೂರೈಕೆಯಿಲ್ಲದೆ ಸಮಸ್ಯೆ ಬೀಕರವಾಗಿದೆ. ನೀರಿಗಾಗಿ ಬಾವಿಗಳಿಗೆ ತೆರಳಿ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಅನೇಕರು ಸಮಸ್ಯೆ ಹೇಳಿಕೊಳ್ಳಲು ಪಂಚಾಯಿತಿ ಕಚೇರಿಗೆ ಹೋದರು. ಹಲವು ಬಾರಿ ಪಂಚಾಯತ ಪಿಡಿಒಗೆ ಮನವಿ ಸಲ್ಲಿಸಿದರು ಸಮಸ್ಯೆಗೆ ಸ್ಪಂದನ ಸಿಗದ ಕಾರಣ ಧರಣಿ ಕುಳಿತು ಸಂಬಂಧಿತ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬೀದಿ ನಾಯಿಗಳ ದಾಳಿ ಖಂಡಿಸಿ ; ಎಸ್ ಡಿಪಿಐ ಪ್ರತಿಭಟನೆ
ಈ ವೇಳೆ ಸಂಘದ ಜಿಲ್ಲಾದ್ಯಕ್ಷ ಶಿವಪುತ್ರಗೌಡ, ಪ್ರಸಾದರೆಡ್ಡಿ , ಆನಂದ ಕುಂಬಾರ, ಹನುಮನಗೌಡ, ಸಹದೇವಪ್ಪ , ಮಹಾಂತೇಶ ಬಸಪ್ಪ, ಸಣ್ಣ ಗದ್ದೆಪ್ಪ , ರಮೇಶ್ ಇನ್ನಿತರರು ಉಪಸ್ಥಿತರಿದ್ದರು.

