ಕಾಮುಕನೊಬ್ಬ ಮನೆಯಲ್ಲಿ ನುಗ್ಗಿ ಮಹಿಳೆಯೋರ್ವರನ್ನು ಅತ್ಯಾಚಾರ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕಾಟಗಲ್ ಗ್ರಾಮದಲ್ಲಿ ನಡೆದಿದೆ.
ಬಸವರಾಜು ಅತ್ಯಾಚಾರ ಮಾಡಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಳೆದ ಭಾನುವಾರ ಮಧ್ಯಾಹ್ನ ಮಹಿಳೆಯೊಬ್ಬಳು ಮನೆಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿದ ಅದೇ ಗ್ರಾಮದ ಆರೋಪಿ, ಮನೆಗೆ ನುಗ್ಗಿ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಗಮನಿಸಿ ಮನೆಯಲ್ಲಿ ನುಗ್ಗಿ ಬಾಗಿಲಿನ ಚಿಲಕ ಹಾಕಿ, ಬಂದ್ ಮಾಡಿದ್ದಾನೆ. ಇದನ್ನು ಗಮನಿಸಿದ ಮಹಿಳೆ ಯಾರು ಎಂದು ನೋಡುವಷ್ಟರಲ್ಲಿ ಬಿಗಿಯಾಗಿ ಬಾಯಿ ಮುಚ್ಚಿಸಿ, ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಮಂಡ್ಯ | ಶತಮಾನಗಳ ಸಾಹಿತ್ಯ ಪರಂಪರೆ ಮುರಿಯಲು ಅವಕಾಶ ನೀಡುವುದಿಲ್ಲ: ಸಾಹಿತಿ ಜಗದೀಶ್ ಕೊಪ್ಪ ಕಿಡಿ
ಅತ್ಯಾಚಾರ ಮಾಡಿದ್ದು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ. ಈ ಸಂಬಂಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಆರೋಪಿ ಬಸವರಾಜನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
