ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಶಾಖೋತ್ಪನ್ನ ಘಟಕಗಳಲ್ಲಿ ಕಾರ್ಮಿಕ ಕಾಯ್ದೆಗಳನ್ನೇ ಗಾಳಿಗೆ ತೂರಿ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಕಾರ್ಮಿಕರಿಗೆ ಶ್ವಾಸಕೋಶ ಸಮಸ್ಯೆ ಸೇರಿದಂತೆ ಅನೇಕ ಅನಾರೋಗ್ಯದಿಂದ ಬಳಲುತ್ತಿರುವ ಕಾರ್ಮಿಕರಿಗೆ ಆಡಳಿತ ಮಂಡಳಿ ಕನಿಷ್ಠ ವೇತನದಿಂದ ವಂಚಿಸಲಾಗುತ್ತಿದೆ ಎಂದು ಹಿಂದ್ ಮಜ್ದೂರು ಕಿಸಾನ್ ಪಂಚಾಯತನ ರಾಷ್ಟ್ರೀಯ ಅಧ್ಯಕ್ಷ ಎಲ್ ಕಾಳಪ್ಪ ಹೇಳಿದರು.
ರಾಯಚೂರು ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರ್ ಟಿ ಪಿ ಎಸ್ ಶಾಖೋತ್ಪನ್ನ ಘಟಕಗಳಲ್ಲಿ ನಿಷೇಧಿತ ಗುತ್ತಿಗೆ ಪದ್ದತಿಯನ್ನು ಹೊರಗುತ್ತಿಗೆ ಏಜೆನ್ಸಿಗಳಿಂದ ಖಾಯಂ ಸ್ವರೂಪದ ಕೆಲಸವನ್ನು ಪಡೆಯಲಾಗುತ್ತಿದೆ. ಗುತ್ತಿಗೆ ಏಜೆನ್ಸಿಗಳಿಗೆ ನೀಡುವ ಕೋಟಿ ಕೋಟಿ ಹಣವನು ದುಡಿಯುವ ಕಾರ್ಮಿಕರಿಗೆ ನೀಡದೇ ಶೋಷಣೆ ಮುಂದುವರೆಸಿದೆ ಎಂದರು.
ಸರಿಸುಮಾರು 1200ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಯಾರಿಗೂ ಸಮರ್ಪಕ ವೇತನ ಸೇರಿ ಯಾವ ಸೌಕರ್ಯಗಳು ಇಲ್ಲ. 250ಕ್ಕೂ ಹೆಚ್ಚು ಜನರು ಇರುವ ಕಂಪನಿಗಳಲ್ಲಿ ಕನಿಷ್ಠ ವೇತನ, ಕ್ಯಾಂಟೀನ್, ರಜೆ, ವಿಶೇಷ ಭತ್ಯೆ ನೀಡಬೇಕಿದ್ದು, ಯಾವುದು ಕೂಡ ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಉತ್ಪಾದಿತ ವಿದ್ಯುತ್ ಮಾರಾಟದಿಂದ ಬರುವ ಹಣವೂ ಕ್ರೋಢೀಕರಿಸಲಾಗುತ್ತಿಲ್ಲ. ಕೆಪಿಟಿಸಿಎಲ್‌ಗೆ ನೀಡುವ ವಿದ್ಯುತ್ ಮಾರಾಟದಿಂದ ಹಣವೇ ಬಾರದೇ ಹೋಗಿದೆ. ಶಾಖೋತ್ಪನ್ನ ಮತ್ತು ಜಲಾಧಾರಿತ ಘಟಕಗಳನ್ನು ಉದ್ದೇಶಿತ ಪೂರಿತವಾಗಿ ಸ್ಥಗಿತಗೊಳಿಸಿ ಬೇರೆಯಡೆಯಿಂದ ವಿದ್ಯುತ್ ಖರೀದಿಸುವ ಕೆಲಸ ಸರ್ಕಾರಗಳು ಮಾಡುತ್ತಿವೆ. ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ರಾಜ್ಯ ಕಾರ್ಮಿಕ ಸಚಿವರಿಗೆ ಮನವಿ ಮಾಡಲಾಗುತ್ತದೆ. ಯಾವುದೇ ಸ್ಪಂದನೆ ದೊರೆಯದೇ ಹೋದಲ್ಲಿ ಕಾರ್ಮಿಕರ ಹೋರಾಟದೊಂದಿಗೆ ಕಾನೂನಾತ್ಮಕ ಹೋರಾಟಕ್ಕೂ ಸಂಘಟನೆ ಮುಂದಾಗಲಿದೆ ಎಂದು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ಗದಗ | 2019ರ ಬಳಿಕ ಜಿಲ್ಲೆಯ ಆಸ್ತಿಗಳಲ್ಲಿ ವಕ್ಫ್ ಎಂದು ನಮೂದಿಸಿಲ್ಲ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸ್ಪಷ್ಟನೆ
ಮತ್ತೊಬ್ಬ ಕಾರ್ಮಿಕ ಮುಖಂಡ ಜೆ.ಎಲ್.ರೆಡ್ಡಿ ಮಾತನಾಡಿ, 1200ಕ್ಕೂ ಹೆಚ್ಚು ಗುತ್ತಿಗೆ ನೌಕರರು ವಿದ್ಯುತ್ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಊಟ ಮಾಡಲು ಸರಿಯಾದ ಸ್ಥಳವಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಕ್ಯಾಂಟೀನ್ ಪ್ರಾರಂಭಿಸಲು ವೈಟಿಪಿಎಸ್ ಆಡಳಿತ ಮಂಡಳಿ ಮುಂದಾಗುತ್ತಿಲ್ಲ. ಪವರ್‌ಮ್ಯಾಕ್ ಕಂಪನಿ ಲಾಭಕ್ಕಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಕಾರ್ಮಿಕರಿಗೆ ಸೌಲಭ್ಯ, ಸೌಕರ್ಯ ಒದಗಿಸಲು ಮುಂದಾಗುತ್ತಿದೆ. ಸರ್ಕಾರವೂ ಮೌನವಾಗಿದೆ. ಗುತ್ತಿಗೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸದೇ ಹೋದಲ್ಲಿ ತೀವ್ರ ಸ್ವರೂಪದ ಹೋರಾಟ ಅನಿವಾರ್ಯವಾಗುತ್ತದೆ ಎಂದರು.
ಈ ಸಂದರ್ಬದಲ್ಲಿ ಮಲ್ಲಪ್ಪ ಧಣಿ, ನಾರಾಯಣಸ್ವಾಮಿ, ಶಿವಾನಂದ ಸೇರಿ ಅನೇಕರಿದ್ದರು.
