ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಿ.ವಿ.ಆರ್. ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಖದೇವ್ 625ರಲ್ಲಿ 625 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲೆಗೆ ಹೆಮ್ಮೆ ತಂದಿದ್ದಾನೆ.
ಅವರು ಪ್ರಥಮ ಭಾಷೆಯಲ್ಲಿ 125 ಅಂಕಗಳು, ದ್ವಿತೀಯ ಭಾಷೆ 100, ಹಿಂದಿ 100, ಗಣಿತ 100, ವಿಜ್ಞಾನ 100 ಮತ್ತು ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಎಸ್ಎಸ್ಎಲ್ ಸಿ ಫಲಿತಾಂಶ | ರಾಯಚೂರು ಜಿಲ್ಲೆ ಶೇ 94.04 ಸಾಧನೆ, ರ್‍ಯಾಂಕ್‌ನಲ್ಲಿ ಏರಿಕೆ
ಈ ಸಾಧನೆಗೆ ತಾಲ್ಲೂಕು ದಂಡಾಧಿಕಾರಿ ಭೀಮರಾಯ ಬಿ. ರಾಮಸಮುದ್ರ, ತಾಲೂಕು ಶಿಕ್ಷಣಾಧಿಕಾರಿ, ಹಾಗೂ ಸಂಸ್ಥೆಯ ಶಿಕ್ಷಕರು ಸೇರಿದಂತೆ ಇತರರು ವಿದ್ಯಾರ್ಥಿಯನ್ನು ಸನ್ಮಾನಿಸಿ ಅಭಿನಂದಿಸಿದರು.





