ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಉತ್ತರ ಕನ್ನಡ ಜಿಲ್ಲೆಯ ಒಟ್ಟು 12 ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳಿಗೆ ಚುನಾಯಿತ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಈ ಕುರಿತು ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಆಯೋಗವು ಬಿಡುಗಡೆ ಮಾಡಿರುವ ಪಟ್ಟಿಯಂತೆ ಜಿಲ್ಲೆಯ ಒಟ್ಟು 228 ಗ್ರಾಮ ಪಂಚಾಯಿತಿಗಳಿಗೆ 2642 ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದೆ.
ತಾಲ್ಲೂಕುವಾರು ವಿವರ ಇಂತಿದೆ: ಹೊನ್ನಾವರ: 26 ಪಂಚಾಯಿತಿಗಳು – 333 ಸದಸ್ಯರು, ಶಿರಸಿ: 32 ಪಂಚಾಯಿತಿಗಳು – 323 ಸದಸ್ಯರು, ಕುಮಟಾ: 22 ಪಂಚಾಯಿತಿಗಳು – 321 ಸದಸ್ಯರು, ಭಟ್ಕಳ: 15 ಪಂಚಾಯಿತಿಗಳು – 254 ಸದಸ್ಯರು, ಅಂಕೋಲಾ: 21 ಪಂಚಾಯಿತಿಗಳು – 226 ಸದಸ್ಯರು, ಕಾರವಾರ: 18 ಪಂಚಾಯಿತಿಗಳು – 226 ಸದಸ್ಯರು,
ಸಿದ್ದಾಪುರ: 23 ಪಂಚಾಯಿತಿಗಳು – 221 ಸದಸ್ಯರು, ಹಳಿಯಾಳ: 20 ಪಂಚಾಯಿತಿಗಳು – 212 ಸದಸ್ಯರು, ಮುಂಡಗೋಡ: 16 ಪಂಚಾಯಿತಿಗಳು – 194 ಸದಸ್ಯರು, ಯಲ್ಲಾಪುರ: 15 ಪಂಚಾಯಿತಿಗಳು – 158 ಸದಸ್ಯರು, ಜೋಯಿಡಾ: 16 ಪಂಚಾಯಿತಿಗಳು – 137 ಸದಸ್ಯರು, ದಾಂಡೇಲಿ: 04 ಪಂಚಾಯಿತಿಗಳು – 37 ಸದಸ್ಯರು,
ಆಕ್ಷೇಪಣೆ ಸಲ್ಲಿಸುವುದು ಹೇಗೆ? ನಿಗದಿಪಡಿಸಿದ ಸದಸ್ಯರ ಸಂಖ್ಯೆಯ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಸಾರ್ವಜನಿಕರು ದಿನಾಂಕ 24-04-2026ರ ಸಂಜೆ 5:00 ಗಂಟೆಯೊಳಗೆ ಸಲ್ಲಿಸಬೇಕು. https://rdpr.karnataka.gov.in/rdc/public/ ಜಾಲತಾಣದ ‘ಸಾರ್ವಜನಿಕ ಸಲಹೆಗಳು’ ವಿಭಾಗದಲ್ಲಿ ಸಲ್ಲಿಸಬಹುದು.
ಈ ಸುದ್ದಿ ಓದಿದ್ದೀರಾ? ದಾಂಡೇಲಿ | ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದ ಕಾರು: ಇಬ್ಬರ ದುರ್ಮರಣ, ಚಾಲಕನ ಸ್ಥಿತಿ ಗಂಭೀರ
ಅಥವಾ ಅಂಚೆ ಮೂಲಕ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ, ಬೆಂಗಳೂರು-560001 ಈ ವಿಳಾಸಕ್ಕೆ ಆಕ್ಷೇಪಣೆ ಅರ್ಜಿ ಕಳುಹಿಸಿಕೊಡಬಹುದು.
ಸಲ್ಲಿಸಲಾದ ಆಕ್ಷೇಪಣೆಗಳ ಪರಿಶೀಲನೆಗಾಗಿ ದಿನಾಂಕ 27-04-2026ರಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:30 ರವರೆಗೆ ಬೆಂಗಳೂರಿನ ಬಹುಮಹಡಿ ಕಟ್ಟಡದ (ಗೇಟ್ ನಂ-2, 2ನೇ ಮಹಡಿ, ಕೊಠಡಿ ಸಂಖ್ಯೆ 229, 230) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ‘ಅದಾಲತ್’ ನಡೆಯಲಿದೆ.
ಆಕ್ಷೇಪಣೆ ಸಲ್ಲಿಸಿದವರು ಅದಾಲತ್‌ನಲ್ಲಿ ಭಾಗವಹಿಸಲು ಇಚ್ಛಿಸಿದರೆ, ಸರ್ಕಾರದಿಂದ ನೀಡಲಾದ ಅಸಲಿ (Original) ಫೋಟೋ ಗುರುತಿನ ಚೀಟಿಯನ್ನು ತರುವುದು ಕಡ್ಡಾಯವಾಗಿದೆ.






