ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ಹಾನಿಗೊಳಗಾದ 19ನೇ ಗೇಟನ್ನು ತಕ್ಷಣವೇ ದುರಸ್ತಿ ಮಾಡಿ ಕೆಳ ಭಾಗದ ಜನರಿಗೆ ನೀರು ಹರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಬಳ್ಳಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಹೆಚ್ಚಿನ ಪ್ರಮಾಣದ ನೀರಿನಿಂದಾಗಿ ಅಣೆಕಟ್ಟಿನ 19ನೇ ಗೇಟ್ ಕೊಚ್ಚಿ ಹೋಗಿದೆ. ಇದರಿಂದ ರೈತರಿಗೆ ಆತಂಕ ಸೃಷ್ಟಿಯಾಗಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಿ, ಕಾರ್ಯಾರಂಭ ಪ್ರಾರಂಭ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ರೈತ ಮುಖಂಡ ಕೃಷ್ಣಪ್ಪ ಮಾತನಾಡಿ, “ಕರ್ನಾಟಕ ರೈತರು ಮತ್ತು ಗಡಿ ಭಾಗದ ಆಂಧ್ರ ರೈತರು ಈ ವರ್ಷ ಸಂಪೂರ್ಣವಾಗಿ ಮಳೆಯಾಗಿ ಡ್ಯಾಂ ತುಂಬಿದ್ದರಿಂದ ಒಂದು ಕಡೆ ಖುಷಿಯಾಗಿತ್ತು .ರೈತರು ಗದ್ದೆ ಮತ್ತು ಹತ್ತಿ, ಮೆಣಸಿನಗಿಡ, ಮೆಕ್ಕೆಜೋಳ, ಹೊಲದಲ್ಲಿ ಬಿತ್ತನೆ ಮಾಡಿದ್ದಾರೆ. ಮಳೆಗಾಲದಲ್ಲಿ ಡ್ಯಾಂ ಹಾಗೂ ಕಾಲುವೆಗಳಿಗೆ ಭೇಟಿ ನೀಡುವುದು, ಪರಿಶೀಲಿಸುವುದು ಅವರ ಅಧಿಕಾರಿಗಳ ಕರ್ತವ್ಯ. ಅವರ ನಿರ್ಲಕ್ಷ್ಯ ಕಾರಣಕ್ಕೆ ಘಟನೆ ಸಂಭವಿಸಿದೆ” ಎಂದು ಆರೋಪಿಸಿದರು.
ಪ್ರತಿ ತಿಂಗಳು ಅಧಿಕಾರಿಗಳು , ಇಂಜಿನಿಯರ್‌ಗಳು , ಸ್ಥಳೀಯ ರೈತರಿಗೆ ಕರೆದು ಕುಂದು ಕೊರತೆ ಸಭೆ ಮಾಡಬೇಕು. ಇಲ್ಲಿಯವರೆಗೂ ಯಾವುದೇ ಸಭೆಯಿಲ್ಲದೆ ಯಾರು ಅಧಿಕಾರಿಗಳು, ಯಾರು ಇಂಜಿನಿಯಯರ್ ಗೊತ್ತಾಗುತ್ತಿಲ್ಲ. ಜವಾಬ್ದಾರಿಯುತ ಇಂಜಿನಿಯರ್ 6 ತಿಂಗಳು ರಜಾ ಇದ್ದಾರೆ. ಅದಕ್ಕೆ ಸರಕಾರ ಹೊಸ ಇಂಜಿನಿಯರ್ ಅವರನ್ನು ನೇಮಕ ಮಾಡಬೇಕು ಎಂದು ರೈತ ಮುಖಂಡ ಕೃಷ್ಣಪ್ಪ ಆಗ್ರಹಿಸಿದರು.
ಮನವಿ ಸಲ್ಲಿಸುವ ವೇಳೆ ಮಾರೆಣ್ಣ, ತಿಮ್ಮಪ್ಪ, ಚಿನ್ನ ರಾಯುಡು, ಯರ್ರಿ ಸ್ವಾಮಿ ಅನೇಕರು ಇದ್ದರು.
