ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳ ಹಿಂಡು ಈಗ ರಾಮನಗರ ಜಿಲ್ಲೆ ಕನಕಪುರ ಪಟ್ಟಣದ ಒಳಗೆ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ನಾಲ್ಕೈದು ಕಾಡಾನೆಗಳ ಹಿಂಡು ಕನಕಪುರ ಪಟ್ಟಣದ ಕುರುಪೇಟೆ ಮತ್ತು ಅರಳಾಳು ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಪ್ರತ್ಯಕ್ಷವಾಗಿದ್ದವು. ಜಮೀನೊಂದರಲ್ಲಿ ಬೆಳಗಿನ ಜಾವ ಈ ಆನೆಗಳು ಕಾಣಿಸಿಕೊಂಡಿವೆ.
ಪಟ್ಟಣದ ಜನರು ಆನೆಗಳನ್ನು ನೋಡಲು ಗುಂಪು ಗುಂಪಾಗಿ ಸೇರಿದ್ದರು. ಆನೆಗಳು ಗುಂಪಾಗಿ ಪಟ್ಟಣ ಪ್ರದೇಶಕ್ಕೆ ಬಂದಿರುವ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿಗೆ ಓಡಿಸುವ ಪ್ರಯತ್ನ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬಿಸಿಯೂಟ ಸೇವಿಸಿ 30 ಮಕ್ಕಳು ಅಸ್ವಸ್ಥ; ನೀರಿನ ಸಮಸ್ಯೆಯೇ ಕಾರಣ?