ತೆಂಗಿನ ಮರಗಳಿಗೆ ನುಸಿ ಮತ್ತು ಗರಿರೋಗ ಕಾಣಿಸಿಕೊಂಡಿದ್ದು, ಈ ರೋಗ ಒಮ್ಮೆ ಒಂದು ತೋಟಕ್ಕೆ ಬಂದರೆ ಇಡೀ ಪ್ರದೇಶದಲ್ಲಿನ ತೆಂಗಿನ ಮರಗಳಿಗೆ ಹರಡಿ ತೋಟವೇ ನಾಶವಾಗುತ್ತದೆ ಎಂಬುದು ರೈತರಲ್ಲಿ ಆತಂಕ ಸೃಷ್ಟಿಸಿದೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ನಲ್ಲಹಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ತೆಂಗಿನ ಮರಗಳಿಗೆ ನುಸಿ ಮತ್ತು ಗರಿರೋಗ ಕಾಣಿಸಿಕೊಂಡಿದೆ. ಈ ರೋಗದ ಕೀಟ ಗಾಳಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ಚಲಿಸುತ್ತದೆ. ಒಂದು ಮರದಲ್ಲಿ ರೋಗ ಕಾಣಿಸಿಕೊಂಡರೆ ಆ ಮರದ ಪೂರ್ಣ ಗರಿಗಳು ನಾಶವಾಗಿ ತೋಟದಲ್ಲಿನ ಎಲ್ಲ ಮರಗಳು ರೋಗದಿಂದ ಬಾಧಿಸಿ ಒಣಗಿ ಹೋಗುತ್ತವೆ.
ಈ ಸುದ್ದಿ ಓದಿದ್ದೀರಾ? ಬರದ ಭೀತಿಯಲ್ಲಿದ್ದ ರೈತರಿಗೆ ಮಳೆ ಸೂಚನೆ
ನಲ್ಲಹಳ್ಳಿ ಗ್ರಾಮದ ಎಲ್ಲ ರೈತರ ತೋಟಗಳು ಇದೇ ರೀತಿ ಆಗಿದ್ದು, ಈಗ ಮರಗಳು ನುಸಿ ಮತ್ತು ಗರಿ ರೋಗದಿಂದ ಒಣಗಲು ಪ್ರಾರಂಬಿಸಿವೆ.
“ತೋಟಗಾರಿಕೆ ಇಲಾಖೆ ಸೇರಿದಂತೆ ಕನಕಪುರ ತಾಲೂಕು ಆಡಳಿತ ಈ ಕಡೆ ಗಮನಹರಿಸಿ ನುಸಿ ಮತ್ತು ಗರಿರೋಗವನ್ನು ಸಂಪೂರ್ಣವಾಗಿ ನಾಶಪಡಿಸಿ, ರೈತರ ನೆರವಿಗೆ ಬರಬೇಕು” ಎಂದು ನಲ್ಲಹಳ್ಳಿ ಗ್ರಾಮದ ರೈತರು ಒತ್ತಾಯಿಸಿದ್ದಾರೆ.