ರಾಮನಗರ | ಅರ್ಕಾವತಿ ನದಿಯಲ್ಲಿ ಮಾತ್ರೆಗಳ ರಾಶಿ; ತಪ್ಪಿತಸ್ಥರ ಕ್ರಮಕ್ಕೆ ಭರವಸೆ

Date:

Advertisements

ರಾಮನಗರದ ಹೊರವಲಯದ ದ್ಯಾವರಸೇಗೌಡನ ದೊಡ್ಡಿ ಸೇತುವೆ ಬಳಿ ಅರ್ಕಾವತಿ ನದಿಗೆ ದುಷ್ಕರ್ಮಿಗಳು ಅವಧಿ ಮೀರಿದ ಮಾತ್ರೆಗಳನ್ನು ಸುರಿದು ಹೋಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡಲೇ ಮಾತ್ರೆ ರಾಶಿಯನ್ನು ತೆರವುಗೊಳಿಸಿದ್ದಾರೆ.

ಜಲಮಂಡಳಿ ಎಂಜಿನಿಯರ್ ಅನಿಲ್ ಅವರು ನೀರಿನ ಮಟ್ಟ ಪರಿಶೀಲಿಸಲು ನದಿ ಬಳಿಗೆ ಬಂದಿದ್ದರು. ಆ ವೇಳೆ ಆರೇಳು ಬಾಕ್ಸ್‌ಗಳಲ್ಲಿ ನದಿಗೆ ತಂದು ಎಸೆದು ಹೋಗಿದ್ದ ಮಾತ್ರೆ ರಾಶಿ ಗಮನಿಸಿ ತಕ್ಷಣ ನಗರಸಭೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ನಗರಸಭೆ ಉಪಾಧ್ಯಕ್ಷ ಸೋಮಶೇಖರ್ ಮಣಿ, ಪರಿಸರ ಎಂಜಿನಿಯರ್ ಸುಬ್ರಹ್ಮಣ್ಯ, ಆರೋಗ್ಯ ನಿರೀಕ್ಷಕ ವಿಜಯಕುಮಾರ್, ತಾಲೂಕು ಆರೋಗ್ಯಾಧಿಕಾರಿ ಉಮಾ ಹಾಗೂ ಇತರರು ಭೇಟಿ ನೀಡಿ ಮಾತ್ರೆಗಳನ್ನು ಪರಿಶೀಲಿಸಿದ್ದಾರೆ. ಬಳಿಕ ತಕ್ಷಣವೇ ಪೌರ ಕಾರ್ಮಿಕರನ್ನು ಸ್ಥಳಕ್ಕೆ ಕರೆಸಿ, ಮಾತ್ರೆಗಳನ್ನು ತೆರವುಗೊಳಿಸಿದ್ದಾರೆ.

“ಹಲವು ಕಂಪನಿಗಳ ಎಲ್ಲ ಮಾತ್ರೆಗಳು ಚೀಲದಲ್ಲಿದ್ದವು. ಅವೆಲ್ಲವೂ ಅವಧಿ ಮುಗಿದಿದ್ದು, ಪ್ಯಾಕಿಂಗ್ ಆಗಿದ್ದರಿಂದ ಇನ್ನೂ ನೀರಿನಲ್ಲಿ ಕರಗಿರಲಿಲ್ಲ. ಅಧಿಕಾರಿ ತೋರಿದ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದ್ದು, ಸಾರ್ವಜನಿಕರು ನದಿಗೆ ಯಾವುದೇ ವಸ್ತುಗಳನ್ನು ಎಸೆಯಬಾರದು. ಇದರಿಂದ ಅದೇ ನೀರನ್ನು ಬಳಸುವವರಿಗೆ ತೊಂದರೆಯಾಗುತ್ತದೆ” ಎಂದು ಸೋಮಶೇಖರ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅನುದಾನ ಮಂಜೂರಾದರೂ ಅಂಗನವಾಡಿ ಕಟ್ಟಡಕ್ಕಿಲ್ಲ ನಿರ್ಮಾಣ ಭಾಗ್ಯ

“ಅರ್ಕಾವತಿ ನದಿಯಲ್ಲಿ ಸಿಕ್ಕಿರುವ ಅವಧಿ ಮೀರಿದ ಮಾತ್ರೆಗಳ ಚೀಲದ ಮೇಲೆ ಐಜೂರು ಬಡಾವಣೆಯ ಧ್ರುವ ಮೆಡಿಕಲ್ ಸ್ಟೋರ್‌ ಹೆಸರು ಇರುವುದು ಪತ್ತೆಯಾಗಿದೆ. ಆತನೇ ಕೃತ್ಯ ಎಸಗಿರುವ ಅನುಮಾನವಿದೆ. ಈ ಕುರಿತು ನಗರಸಭೆ ಪೌರಾಯುಕ್ತರು ನೀಡಿದ ದೂರಿನ ಮೇರೆಗೆ ಮೆಡಿಕಲ್ ಮಾಲೀಕನಿಗೆ ನೊಟೀಸ್ ನೀಡಲಾಗುವುದು. ಜೊತೆಗೆ ಪೊಲೀಸ್ ಠಾಣೆಗೂ ದೂರು ನೀಡಲಾಗುವುದು” ಎಂದು ಜಿಲ್ಲಾ ಔಷಧ ನಿಯಂತ್ರಣ ಇಲಾಖೆಯ ಸಹಾಯಕ ನಿಯಂತ್ರಕಿ ಮಮತಾ ಅವರು ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X