ಗುತ್ತಿಗೆದಾರರಿಂದ 20,000 ರೂ. ಲಂಚ ಪಡೆಯುತ್ತಿದ್ದ ವೇಳೆ ಪಿಡಿಒ ಒಬ್ಬರನ್ನು ಲೋಕಾಯುಕ್ತ ಪೊಲೀಸರು ‘ರೆಡ್‌ಹ್ಯಾಂಡ್’ಆಗಿ ಹಿಡಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕನಕಪುರ ತಾಲೂಕಿನ ಸೋಮದಪ್ಪನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಒ ಮುನಿರಾಜು ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಿಡಿಒ ಮುನಿರಾಜು ಅವರು ಗ್ರಾಮ ಪಂಚಾಯತಿಯಿಂದ ಗುತ್ತಿಗೆ ಕೊಡಬೇಕೆಂದರೆ 20,000 ರೂ. ಲಂಚ ಕೊಡಬೇಕೆಂದು ಗುತ್ತಿಗೆದಾರ ವೆಂಕಟಾಚಲಯ್ಯ ಬಳಿ ಬೇಡಿಕೆ ಇಟ್ಟಿದ್ದರು. ಪಿಡಿಒ ಲಂಚ ಕೇಳಿದ ಬಗ್ಗೆ ಗುತ್ತಿಗೆದಾರ ವೆಂಕಟಾಚಲಯ್ಯ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ರಾಮನಗರ ಲೋಕಾಯುಕ್ತ ಪೊಲೀಸರು ಬುಧವಾರ ವೆಂಕಟಾಚಲಯ್ಯ ಅವರನ್ನು ಮುಂದೆಬಿಟ್ಟು ಗ್ರಾಮ ಪಂಚಾಯತಿ ಮೇಲೆ ದಾಳಿ ನಡೆಸಿದ್ದಾರೆ. ವೆಂಕಟಾಚಲಯ್ಯ ಅವರಿಂದ ಪಿಡಿಒ ಮುನಾರಾಜು ಲಂಚ ಸ್ವೀಕರಿಸುತ್ತಿದ್ದ ವೇಳೆ ‘ರೆಡ್‌ಹ್ಯಾಂಡ್’ಆಗಿ ಹಿಡಿದಿದ್ದಾರೆ.
ಪಿಡಿಒ ಮುನಿರಾಜು ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.
Nagraj mange Tanda