ರಾಮನಗರ | ಡಾ. ಬಂಜಗೆರೆ ಜಯಪ್ರಕಾಶ್‌ ಅವರಿಗೆ ಪ್ರಶಸ್ತಿ ಗೌರವ: ‘ಜನಮುಖಿ ಜೆಪಿ’ ಕಾರ್ಯಕ್ರಮ ಸಫಲ

Date:

ಹಿರಿಯ ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ (ಜೆ.ಪಿ) ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯಶ್ರೀ’ ಹಾಗೂ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ‘ಗೌರವ ಪ್ರಶಸ್ತಿ’ ಲಭಿಸಿದೆ. ಈ ಹಿನ್ನೆಲೆಯಲ್ಲಿ ಅವರ ಬದುಕು, ಬರಹ ಮತ್ತು ಹೋರಾಟದ ಕುರಿತು ‘ಜನಮುಖಿ ಜೆಪಿ’ ಅವಲೋಕನ ಕಾರ್ಯಕ್ರಮವನ್ನು ರಾಮನಗರದ ಎಲ್ಲ ಜನಪರ ಸಂಘಟನೆಗಳ ಒಕ್ಕೂಟವಾದ ‘ನಮ್ಮವರು’ ಆಯೋಜಿಸಿತ್ತು. ಸಮಾರಂಭವು ಅತ್ಯಂತ ಆತ್ಮೀಯ ಮತ್ತು ಅರ್ಥಪೂರ್ಣ ವಾತಾವರಣದಲ್ಲಿ ನೆರವೇರಿದೆ ಎಂದು ‘ನಮ್ಮವರು’ ಬಳಗ ತಿಳಿಸಿದೆ.

- Advertisement -

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಎಸ್. ಜಿ. ಸಿದ್ದರಾಮಯ್ಯ ಅವರು, “ಪ್ರಸ್ತುತ ಸಮಾಜವು ಛಿದ್ರವಾಗುತ್ತಿದ್ದು, ಮನಸ್ಸುಗಳು ಕರಾಳವಾಗಿ ಹಿಂಸೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಇವುಗಳ ವಿರುದ್ಧ ಇಂದಿನ ‘ಜೆನ್ – ಜಿ’ ತಲೆಮಾರು ಹೋರಾಟಕ್ಕೆ ನಿಂತಿದೆ. ಇಂತಹ ಪ್ರಮುಖ ಚಳುವಳಿಗಳ ಗರ್ಭದಲ್ಲಿ ಬಂಜಗೆರೆ ಜಯಪ್ರಕಾಶ್ ಅವರಿದ್ದಾರೆ. ಅವರು ತಮ್ಮ ಬದುಕು ಮತ್ತು ಬರಹ ಒಂದೇ ಎಂಬಂತೆ ತತ್ವನಿಷ್ಠೆಯನ್ನು ಮೈಗೂಡಿಸಿಕೊಂಡವರು” ಎಂದು ಬಣ್ಣಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

“ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಗಳಲ್ಲಿ ಜೆ. ಪಿ ಅವರ ಪಾತ್ರ ಅತ್ಯಂತ ಮುಖ್ಯವಾದದ್ದು. ಯಾವುದೇ ವ್ಯಕ್ತಿಗತ ಮೇಲ್ಮೆಯನ್ನು ಬಯಸದೆ, ಅರಿವಿನ ಮೇಲ್ಮೆಯನ್ನು ಕಾಯ್ದುಕೊಂಡ ಉನ್ನತ ವ್ಯಕ್ತಿತ್ವ ಅವರದ್ದಾಗಿದೆ. ಸಂಘಟನೆ ಮತ್ತು ಹೋರಾಟದ ಹಾದಿಯಲ್ಲಿ ಜೈಲುವಾಸ ಅನುಭವಿಸಿದರೂ ಎಂದಿಗೂ ಧೃತಿಗೆಡದೆ ತಮ್ಮ ತತ್ವನಿಷ್ಠೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಅವರ ಈ ಪಯಣಕ್ಕೆ ಪತ್ನಿ ನಾಗರತ್ನ ಅವರ ಸಂಪೂರ್ಣ ಸಹಕಾರ ಮತ್ತು ಬೆಂಬಲವಿದ್ದು, ಅವರಿಬ್ಬರ ಬದುಕು ಒಂದು ಸುಂದರ ತೋಟದಂತಿದೆ” ಎಂದು ಎಸ್.ಜಿ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.

ಇದೇ ವೇಳೆ ಜೆ.ಪಿ ಅವರ ಸಾಹಿತ್ಯಿಕ ಕೊಡುಗೆಯನ್ನು ಸ್ಮರಿಸಿದ ಅವರು, “ಜೆ.ಪಿ ಅನುವಾದಕ್ಕೆ ಆಯ್ಕೆ ಮಾಡಿಕೊಂಡ ಎಲ್ಲ ಕೃತಿಗಳೂ ಸಾಮಾಜಿಕ ಚಳುವಳಿಗಳ ಉಪ ಉತ್ಪನ್ನಗಳಂತಿವೆ” ಎಂದಿದ್ದಾರೆ‌

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರವಿ ಬಾಗಿ ಅವರು, “ಜೆ.ಪಿ ಅವರು ತಮ್ಮ ಇಡೀ ಚಿಂತನೆಯ ಉದ್ದಕ್ಕೂ ತಳಸಮುದಾಯಗಳ ಹಿತಕ್ಕಾಗಿಯೇ ಯೋಚಿಸಿದವರು. ಸಮಾಜವನ್ನು ಆಳುವ ಯಜಮಾನ ಸಂಸ್ಕೃತಿಯ ವಿರುದ್ಧ ಸದಾ ಪ್ರತಿರೋಧ ಒಡ್ಡಿದ ಜೆ.ಪಿ, ಸತ್ಯ ಮತ್ತು ಸಮಾಜದ ಪರವಾಗಿ ಹೋರಾಟ ನಡೆಸಿದ ಕಾರಣಕ್ಕಾಗಿಯೇ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಯಿತು ಎಂದರು. ಮುಂದುವರಿದು ಮಾತನಾಡಿದ ಅವರು, ಜೆ.ಪಿ ಅವರು ಬಯಸಿದ್ದರೆ ಯಾವುದೋ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಬಹುದಿತ್ತು. ಆದರೆ ಅವರು ಹಾಗಾಗದೆ, ತಾವೇ ಖುದ್ದು ಒಂದು ವಿಶ್ವವಿದ್ಯಾಲಯವಾಗಿ ಬೆಳೆದರು ಮತ್ತು ನಾವೆಲ್ಲರೂ ಅವರ ವಿದ್ಯಾರ್ಥಿಗಳಾದೆವು” ಎಂದು ಹೆಮ್ಮೆಯಿಂದ ಸ್ಮರಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧಾರ : ಸಿ.ಸೋಮಶೇಖರ್‌

ನಾಡಿನ ಹಿರಿಯ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹಿತೈಷಿಗಳ ಒತ್ತಾಯದ...

ಹಾವೇರಿ | ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಕಲಬುರಗಿಯಲ್ಲಿ ಎಸ್ಎಫ್ಐ 17ನೇ ರಾಜ್ಯ ಸಮ್ಮೇಳನ: ಬಸವರಾಜ ಎಸ್

ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಲು, ಕೋಮು ಸೌಹಾರ್ದತೆಗಾಗಿ,...

ಉದ್ಯೋಗ ಮಾಹಿತಿ: SSLC, ITI ಪಾಸಾದವರಿಗೆ ಅವಕಾಶ; BHELನಲ್ಲಿ 660 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ವಲಯದ 'ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್' (BHEL) ಸಂಸ್ಥೆ ಬೃಹತ್...