ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಶಾಸಕರಾಗಿದ್ದ ಅವಧಿಯಲ್ಲಿ ದಲಿತ ಕುಟುಂಬವೊಂದಕ್ಕೆ ಸೇರಿದ್ದ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು ಎಂದು ವಕೀಲ ಮಂಜುನಾಥ್ ಪ್ರಸಾದ್ ಗಂಭೀರ ಆರೋಪಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಕಲ್ಮನೆ ಗ್ರಾಮದಲ್ಲಿ ಸರ್ಕಾರದಿಂದ ಮಂಜೂರಾಗಿ, ಸಾಗುವಳಿ ಚೀಟಿ ಹಾಗೂ ಪೌತಿ ಖಾತೆ ಪಡೆದಿದ್ದ 5 ಎಕರೆ ಜಮೀನನ್ನು ಗುರಿಯಾಗಿಸಿ 2016-17ರ ಅವಧಿಯಲ್ಲಿ ಶಾಸಕರಾಗಿದ್ದ ಎಂ.ಪಿ. ಕುಮಾರಸ್ವಾಮಿ ಅವರು ಈ ಜಾಗವನ್ನು ತಮ್ಮ ಹದ್ದುಬಸ್ತಿಗೆ ತೆಗೆದುಕೊಳ್ಳಲು ಮುಂದಾಗಿದ್ದರು. ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ, ಈ 5 ಎಕರೆಯಲ್ಲಿ 3 ಎಕರೆ ಜಾಗವನ್ನು ಅಂಬೇಡ್ಕರ್ ಭವನ, ಅಂಗನವಾಡಿ ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಬಳಸಲಾಗಿದೆ ಎಂದು ಬಿಂಬಿಸಿ ದಲಿತ ಕುಟುಂಬವನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿಸಲಾಗಿತ್ತು.
ಇದನ್ನ ಓದಿದ್ದೀರಾ?ಹಾಸನ | ಮನೆಯಲ್ಲಿಯೇ ವ್ಯಕ್ತಿ ಹತ್ಯೆ; ಪ್ರಕರಣ ದಾಖಲು
ಈ ವಿಚಾರವಾಗಿ ಅನ್ಯಾಯದ ವಿರುದ್ಧ ನೊಂದ ಕುಟುಂಬದವರು ಹೈಕೋರ್ಟ್ ಮೊರೆ ಹೋಗಿದ್ದರು ಸುಧೀರ್ಘವಾಗಿ ನಡೆದ ಕಾನೂನು ಹೋರಾಟದಲ್ಲಿ ಅಂತಿಮವಾಗಿ ಮಾಜಿ ಶಾಸಕರ ವಿರುದ್ಧವಾಗಿ ತೀರ್ಪು ಬಂದಿದ್ದು ಹೈಕೋರ್ಟ್ ಆದೇಶದಂತೆ ಆರು ತಿಂಗಳೊಳಗೆ ಸಂತ್ರಸ್ತರಿಗೆ ಜಮೀನನ್ನು ಮರುಸ್ಥಾಪಿಸಿ ದಾಖಲೆಗಳನ್ನು ಸರಿಪಡಿಸಬೇಕು ಆದೇಶ ನೀಡಿದೆ.





