ಮುಖ್ಯಮಂತ್ರಿಗಳು ಮಾಗಡಿಯಲ್ಲಿ ಮಾತನಾಡುತ್ತಾ ನಂದಿನಿ ಹಾಲಿನ ದರವನ್ನು ಹೆಚ್ಚಿಸಿ, ಆ ಹಣವನ್ನ ಹಾಲು ಉತ್ಪಾದಕ ರೈತರಿಗೆ ಕೊಡುತ್ತೇನೆಂದು ಘೋಷಣೆ ಮಾಡಿರುವುದನ್ನು ಸ್ವಾಗತಿಸುತ್ತೇವೆ ಎಂದು ರೈತಸಂಘದ ಸಂಚಾಲಕರಾದ ಚೀಲೂರು ಮುನಿರಾಜು ಹರ್ಷ ವ್ಯಕ್ತಪಡಿಸಿದರು.
ಅವರು ಸೆ.14ರ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ರೈತ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಒಳ್ಳೆಯ ನಿರ್ಧಾರ. ಆದರೆ ಹಾಲು ಒಕ್ಕೂಟ ಹಾಗು ಮುಖ್ಯಮಂತ್ರಿಗಳು ತಮ್ಮ ಮಾತಿಗೆ ತಪ್ಪಬಾರದೆಂದು ಎಂದು ಎಚ್ಚರಿಸಿದರು.
ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರರಾದ ಕುಮಾರಸ್ವಾಮಿ ಮಾತನಾಡುತ್ತ, ಈಗಲಾದರೂ ಮುಖ್ಯಮಂತ್ರಿಗಳಿಗೆ ರೈತರ ಮೇಲೆ ಕಾಳಜಿ ಇಟ್ಟು ಹಾಲಿನ ಪ್ಯಾಕೆಟ್ ದರವನ್ನು ಹೆಚ್ಚಿಸಿ ರೈತರಿಗೆ ಕೊಡುವುದಾಗಿ ಹೇಳಿರುವ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದರು.

ಈ ಹಿಂದೆ ಹಲವಾರು ಬಾರಿ ಕೊಟ್ಟ ಮಾತು ತಪ್ಪಿದ್ದಾರೆ. ಈಗಲಾದರೂ ನುಡಿದಂತೆ ನಡೆಯಬೇಕು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂಬ ಹೇಳಿಕೆ ಸರಿಯಲ್ಲ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡದೆ ರೈತರ ಪರವಾಗಿ ನಿಲ್ಲಬೇಕು. ರೈತ ಸಂಕಷ್ಟದಲ್ಲಿ ಇರುವ ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಸ್ವಾಗತಿಸಬೇಕು ಸರಕಾರ ಮಾತಿಗೆ ತಪ್ಪಿದರೆ ನಮ್ಮ ಹೋರಾಟ ನಿರಂತರ ಎಂದರು.
ಇದನ್ನು ಓದಿದ್ದೀರಾ? ನಾಗಮಂಗಲ | ರಾಜಕೀಯ ಪಿತೂರಿಗಳಿಂದ ಕೋಮುಗಲಭೆ ಸೃಷ್ಟಿ: ಎಸ್ ಹೆಚ್ ಲಿಂಗೇಗೌಡ ಆರೋಪ
ಇದೇ ಸಂದರ್ಭದಲ್ಲಿ ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾದ್ಯಕರಾದ ಕನ್ನಡ ಭಾಸ್ಕರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
