ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರಸಭೆ ಹಾಗೂ ಸಂಗಮ ಟಾಕೀಸ್ ಮಧ್ಯದಲ್ಲಿರುವ ವೃತ್ತಕ್ಕೆ ಡಾ.ಬಿ.ಆರ್. ಅಂಬೇಡ್ಕರ ನಾಮಫಲಕವನ್ನು ಅಳವಡಿಸಲಾಗಿದೆ. ಈ ವೃತ್ತಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಹಾವೇರಿಯ ನೂತನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಜಿಲ್ಲಾಡಳಿತ ಭವನದಲ್ಲಿ ನೂತನ ಜಿಲ್ಲಾಧಿಕಾರಿಗಳಾದ ವಿಜಯ ಮಹಾಂತೇಶ್ ದಾನಮ್ಮನವರ ಅವರನ್ನು ಭೇಟಿಯಾದ ದಲಿತ ಸಂಘರ್ಷ ಸಮಿತಿಯ ಮುಖಂಡರು, ಗೌರವಿಸಿ ಸನ್ಮಾನಿಸಿದರು. ಆ ಬಳಿಕ ಮನವಿ ಸಲ್ಲಿಸಲಾಯಿತು.
ರಾಣೆಬೆನ್ನೂರು ನಗರದಲ್ಲಿ ಸಂವಿಧಾನ ಶಿಲ್ಪಿ ಮಹಾಮಾನವತಾವಾದಿ ಭಾರತರತ್ನ ಡಾ ಬಿ. ಆರ್. ಅಂಬೇಡ್ಕರ್ ಅವರ ನಾಮ ಫಲಕವನ್ನು ಅಳವಡಿಸಿದ್ದು, ನಗರದ ಬೃಹತ್ ವೃತ್ತಕ್ಕೆ ಡಾ.ಬಿ. ಆರ್. ಅಂಬೇಡ್ಕರ್ ಅವರ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡಲು ಅನೇಕರು ಹಲವಾರು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಗಳಿಗೆ, ನಗರಸಭೆಗೆ ಮನವಿ ಸಲ್ಲಿಸುತ್ತಾ ಬಂದಿದೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಂಬೇಡ್ಕರ್ ಸರ್ಕಲ್ ಎಂದು ನಾಮಕರಣ ಮಾಡುವುದರ ಜೊತೆಗೆ ಅಂಬೇಡ್ಕರ್ ಅವರ ಪುತ್ಥಳಿಯನ್ನು ಕೂಡ ಪ್ರತಿಪ್ಠಾಪಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿಗೆ ಸ್ಪಂದಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ನಿಯೋಗ ತಿಳಿಸಿದೆ.
ಈ ಸಂದರ್ಭದಲ್ಲಿ ದಸಂಸ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ, ರಾಜ್ಯ ಮುಖಂಡರಾದ ಅಕ್ಷತಾ ಕೆ ಸಿ, ಜಿಲ್ಲಾ ಪ್ರಧಾನ ಸಂಚಾಲಕರಾದ ಮಲ್ಲೇಶಪ್ಪ ಡಿ, ಮೆಣಸಿನಹಾಳ ಜಿಲ್ಲಾ ಸಂಚಾಲಕರಾದ ಮಂಜಪ್ಪ ಮರೋಳ, ರೇಣುಕಾ ಬಡಕ್ಕಣ್ಣನವರ, ಹನುಮಂತಪ್ಪ ಕಬ್ಬಾರ, ಮಲ್ಲೇಶ ಕಜ್ಜರಿ, ಮೈಲಪ್ಪ ಡಿ,ಜಗದೀಶ ಹರಿಜನ, ಪ್ರವೀಣ ಸಣ್ಣ ನೀಲಪ್ಪನವರ, ಮಲ್ಲೇಶ ನಿಂಗಮ್ಮನವರ, ಸೋನು ಕರೆತಿಮ್ಮಣ್ಣನವರ, ಭರತ್ ಪೂಜಾರ, ನವೀನ ಮೆಣಿಸಿನಹಾಳ, ಪ್ರವೀಣ ಮುದೇನೂರ, ನೀಕಿತ್ ಮೆಣಿಸಿನಹಾಳ, ಮಂಜು ಗುಡ್ಡಣ್ಣನವರ, ಮಲ್ಲೇಶಪ್ಪ ಹರಿಜನ, ಶ್ಯಾಮ್ ಪೂಜಾರ, ರಾಕೇಶ್ ಪೂಜಾರ, ಆಕಾಶ್, ಹಾಲೇಶ, ಸುರೇಶ, ಪ್ರೇಮ, ಕಿರಣ, ಮಾಂತೇಶ ಬಸವಣ್ಣೆಪ್ಪ, ಫಕೀರಪ್ಪ, ನೀಲಪ್ಪ ಹಾಗೂ ಇತರರು ಇದ್ದರು.
