ರಾಣೆಬೆನ್ನೂರು ನಗರದ ಜೂಬಲಿ ಪಾರ್ಕ್ ಹತ್ತಿರ ಇರುವ ನೀರಿನ ಟ್ಯಾಂಕ್ ಹತ್ತಿರ ಇರುವ ಸಾರ್ವಜನಿಕರ ಶೌಚಾಲಯವು ಗಬ್ಬೆದ್ದು ನಾರುತ್ತಿರುವುದರಿಂದ ಬಳಕೆಗೆ ಯೋಗ್ಯವಾಗಿಲ್ಲ. ಆದ್ದರಿಂದ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಜಾಧವ ಮಾತನಾಡಿ, ರಾಣೆಬೆನ್ನೂರು ನಗರದ ಮೆಡ್ಲೇರಿ ರಸ್ತೆಯಲ್ಲಿ ಇರುವ ಜೂಬಲಿ ಪಾರ್ಕ್ ಹತ್ತಿರ ನೀರಿನ ವಾಟರ್ ಟ್ಯಾಕ್ ಹತ್ತಿರ ಇರುವ ಸಾರ್ವಜನಿಕರ ಶೌಚಾಲಯವೊ ಅಥವಾ ತರಕಾರಿ ಮಾರುವವರ ಮನೆಯೊ ಗೊತ್ತಾಗುತ್ತಿಲ್ಲ. ಏಕೆಂದರೆ ಸಾರ್ವಜನಿಕರ ಶೌಚಾಲಯವು ಕ್ಲಿನ್ ಇಲ್ಲದ ಕಾರಣ ಗಬ್ಬೆದ್ದು ನಾರುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತರಕಾರಿ ಮಾರುವವರು ಶೌಚಾಲಯದಲ್ಲಿ ಖಾಲಿ ಬುಟ್ಟಿಗಳನ್ನು ಇಟ್ಟು ತಾಲೂಕಿನಾದ್ಯಂತ ಸಾರ್ವಜನಿಕರಿಗೆ ತರಕಾರಿ ಮಾರುತ್ತಿದ್ದಾರೆ. ಇಲ್ಲಿ ತರಕಾರಿ ತೆಗೆದುಕೊಂಡು ಹೋಗಿ ಅಡುಗೆ ಮಾಡಿಕೊಂಡು ತಿನ್ನುತ್ತಿರುವವರ ಆರೋಗ್ಯದ ಪರಿಸ್ಥಿತಿ ಏನಾಗಬಹುದು. ನೀವೇ ವಿಚಾರಮಾಡಿ ನೋಡಬೇಕು. ಇಂತ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಕೂಡಾ ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಹೊಸಪೇಟೆ | ವಿದ್ಯಾರ್ಥಿನಿಯರ ಮೇಲೆ ನಿರಂತರ ದೌರ್ಜನ್ಯ: ಎಸ್‌ಎಫ್‌ಐಯಿಂದ ಪ್ರತಿಭಟನಾ ಧರಣಿ
ನಗರ ಘಟಕದ ಅಧ್ಯಕ್ಷ ಮೃತುಂಜಯ ಕರಿಯಜ್ಜಿ ಮಾತನಾಡಿ, ಇಲ್ಲಿ ಇರುವ ಶೌಚಾಲಯವನ್ನು ಕೂಡಲೇ ಕ್ಲೀನ್ ಮಾಡಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರಿಪಡಿಸಿ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಏನಾದರೂ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಸಮಸ್ತ ಪದಾಧಿಕಾರಿಗಳು ಸೇರಿ ನಗರಸಭೆ ಎದುರು ಕುಳಿತು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಚಂದ್ರಪ್ಪ ಬಣಕಾರ ಗೋಪಿ, ಕುಂದಾಪುರ ಪರಶುರಾಮ ಕುರುವತ್ತಿ, ರಿಯಾಜ್ ಅಹ್ಮದ್ ದೊಡ್ಮನಿ ಮತ್ತಿತರರು ಉಪಸ್ಥಿತರಿದ್ದರು.

ತುಂಬಾ ಒಳ್ಳೆಯ ಸಂಧೆಶಗಳು ಸರ್