ಅತ್ಯಾಚಾರದಿಂದ ಮನನೊಂದ 17 ವರ್ಷದ ತನ್ನ ಮಗಳು ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ ಎಂದು ಬಾಲಕಿ ಪೋಷಕರು ಆರೋಪಿಸಿ ಭಾಸ್ಕರ್ ಸೂರ್ಯಕಾಂತ್ ಎಂಬುವವರ ವಿರುದ್ಧ ಕಲಬುರಗಿ ಜಿಲ್ಲೆಯ ಚಿಂಚೋಳಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ʼಮೃತ ಬಾಲಕಿಯು ಚಿಂಚೋಳಿ ತಾಲೂಕಿನ ಖಾಸಗಿ ಕಾಲೇಜುಯೊಂದರಲ್ಲಿ ಪಿಯುಸಿ ಓದುತ್ತಿದ್ದಳು. ಆರೋಪಿ ಭಾಸ್ಕರ್ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಕೃತ್ಯವನ್ನು ನೆರೆಮನೆಯವರು ನೋಡುತ್ತಿದ್ದಂತೆ ಅಲ್ಲಿಂದ ಭಾಸ್ಕರ್ ಓಡಿ ಹೋಗಿದ್ದಾನೆ. ಅವನ ಹಿಂದೆ ನೆರೆಮನೆಯವರು ಓಡಿದರೂ ಆತ ಸಿಗಲಿಲ್ಲʼ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ; ಕಾನ್‌ಸ್ಟೇಬಲ್ ಅಮಾನತು
ಈ ಕೃತ್ಯದಿಂದ ಮನನೊಂದ ಯುವತಿ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾಳೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನಪ್ಪಿದ್ದಾಳೆ. ಆರೋಪಿ ಭಾಸ್ಕರ್ ವಿರುದ್ಧ ಪೋಕ್ಸೊ ಅಡಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.