ಓದುಗರ ಪತ್ರ | ಪಿಎಚ್‌ಡಿ ಸಂಶೋಧನಾರ್ಥಿಗಳ ಫೆಲೋಶಿಪ್ ಹೆಚ್ಚಿಸಿ

Date:

Advertisements

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಸಮಾನತೆ ಬಗ್ಗೆ ಮಾತಾಡ್ತಾರೆ. ಇದಕ್ಕಾಗಿ, ಈ ಬಾರಿ ಅಲ್ಪಸಂಖ್ಯಾತರ ಮತಗಳು ಒಕ್ಕೊರಲಿನಿಂದ ಕಾಂಗ್ರೆಸ್‌ಗೆ ಬಂದವು. ಅನೇಕ ಯೋಜನೆಗಳನ್ನು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಶೈಕ್ಷಣಿಕ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ, ಕೋಮುವಾದಿ ಬಿಜೆಪಿ ಅಧಿಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಎಂಫಿಲ್, ಪಿಎಚ್‌ಡಿ ಸಂಶೋಧನಾರ್ಥಿಗಳ ಫೆಲೋಶಿಪ್ ಅನ್ನು 25 ಸಾವಿರದಿಂದ 10 ಸಾವಿರಕ್ಕೆ ಕಡಿತಗೊಳಿಸಿತು. ಅನೇಕ ಯೋಜನೆಗಳನ್ನು ರದ್ದು ಮಾಡಿತು.

ಇವಾಗ, ಮತ್ತೆ ಕಾಂಗ್ರೆಸ್ ಸರ್ಕಾರ ಬಂದಿದೆ. ಆದರೆ, ಈಗಲೂ ಬಿಜೆಪಿ ಮೋಟುಕುಗೊಳಿಸಿದ್ದ ರೀತಿಯಲ್ಲಿಯೇ ಯೋಜನೆಗಳು ಮುಂದುವರೆದಿವೆ. ರಾಜ್ಯದಲ್ಲಿ ಹೆಚ್ಚೆಂದರೆ 50ರಿಂದ 80 ಮಂದಿ ಅಲ್ಪಸಂಖ್ಯಾತ ಸಮುದಾಯದ ಸಂಶೋಧನಾರ್ಥಿಗಳು ಇರಬಹುದು. ಆದರೆ, ಅವರಿಗೆ ಜೆಆರ್‌ಎಫ್‌ ಮಾದರಿಯಲ್ಲಿ ಫೆಲೋಶಿಪ್ ಕೊಡ್ತಾ ಇದ್ದಿವಿ ಅಂತ ಜಾಹೀರಾತು ನೀಡಿರುವ ಸರ್ಕಾರ, ಮತ್ತೆ ಬಿಜೆಪಿ ಕಡಿತಗೊಳಿಸಿದ್ದಂತೆ ಕೇವಲ 10 ಸಾವಿರ ರೂ. ಫೆಲೋಶಿಪ್‌ ನೀಡುವುದಾಗಿ ಹೇಳಿದೆ. ಫೆಲೋಶಿಪ್‌ ಬಗ್ಗೆ ಅಧಿಕಾರಿಗಳಿಗೂ ಸರಿಯಾದ ಮಾಹಿತಿ ಇಲ್ಲ. ಕೆಲವರು 25,000 ರೂ. ಎಂದರೆ, ಇನ್ನೂ ಕೆಲವರು 10,000 ರೂ. ಎನ್ನುತ್ತಿದ್ದಾರೆ. ನೋಟಿಫಿಕೇಶನ್‌ನಲ್ಲಿ ಫೆಲೋಶಿಪ್ ಮೊತ್ತ ಎಷ್ಟು ಎಂದು ಸರಿಯಾಗಿ ತಿಳಿಸಲಾಗಿಲ್ಲ.

ಅಲ್ಪಸಂಖ್ಯಾತ ವರ್ಗದ ಮಕ್ಕಳು ಐಎಎಲ್‌, ಐಪಿಎಸ್‌, ಐಎಫ್‌ಎಸ್‌ – ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಅಗತ್ಯವಿರುವ ತರಬೇತಿಗಾಗಿ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಪಡೆದ ರ್ಯಾಂಕ್ ಮೇಲೆ ದೆಹಲಿ, ಹೈದ್ರಾಬಾದ್, ಬೆಂಗಳೂರು, ಧಾರವಾಡ ಮುಂತಾದ ಪ್ರದೇಶಗಳ ಉನ್ನತ ಕೋಚಿಂಗ್ ಸೆಂಟರ್‌ಗಳಿಗೆ ಕಳುಹಿಸಿಕೊಡಲಾಗುತ್ತಿತ್ತು.

Advertisements

ಆದರೆ, ಇವಾಗ ಬೆಂಗಳೂರಿನ ಹಜ್ ಭವನದಲ್ಲಿ ರೂಂ ಗಳು ಕಾಲಿ ಇವೆಯಂತೆ ಅದಕ್ಕಾಗಿ ಇಲ್ಲಿಯೇ ಕೋಚಿಂಗ್ ಕೊಡ್ತಾರಂತೆ! ಇದು ಮೂರ್ಖತನ ಅಲ್ಲವೇ? ಇಲ್ಲಿ ಕೋಚಿಂಗ್ ನೀಡುವುದನ್ನೂ ಒಂದು ಆಯ್ಕೆಯನ್ನಾಗಿ ಮಾಡಬೇಕೇ ಹೊರತು, ದೆಹಲಿ, ಹೈದ್ರಾಬಾದ್ ಕೋಚಿಂಗ್ ಸೆಂಟರ್‌ಗಳಿಗೆ ಕಳುಹಿಸುವುದನ್ನೇ ನಿಲ್ಲಿಸುವುದು ಸರಿಯಲ್ಲ. ಇದು ಅಲ್ಪಸಂಖ್ಯಾತ ವರ್ಗದ ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಆಕಾಂಕ್ಷಿಗಳ ಕನಸ್ಸನ್ನು ನುಚ್ಚುನೂರು ಮಾಡುತ್ತದೆ.

ಅಲ್ಪಸಂಖ್ಯಾತ ವಿಧ್ಯಾರ್ಥಿಗಳು ಉನ್ನತ ಸ್ಥಾನಗಳನ್ನು ಪಡೆಯಬಾರದು, ಪಂಚರ್ ಹಾಕೋಕೆ ಹೋಗಬೇಕು ಅನ್ನೋದು ಇವರ ಆಲೋಚನೆಯಾಗಿದೆಯೇ? ಅಲ್ಪಸಂಖ್ಯಾತ ವರ್ಗದ ಮತಗಳನ್ನು ಪಡೆದವರು, ಅವರ ಶೈಕ್ಷಣಿಕ ವಿಷಯ ಬಂದಾಗ ಜಾಣ ಮೌನಕ್ಕೆ ಜಾರುತ್ತಾರೆ. ಕೂಡಲೇ ಜೆಆರ್‌ಎಫ್‌ ಮಾದರಿಯಲ್ಲಿ 30,000 ರೂ. ಫೆಲೋಶಿಪ್‌ ನಿಗದಿ ಮಾಡಬೇಕು.

– ಎಂ.ಕೆ ಸಾಹೇಬ್, ಕೊಪ್ಪಳ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

Download Eedina App Android / iOS

X